ಶನಿವಾರ, ಜೂನ್ 29, 2013

ಅನಾಲ್ಜಿನ್  ನಗುತಿತ್ತು .....

ಆರೋಗ್ಯಕ್ಕೆ  ಹಾನಿ
ಅನಾಲ್ಜಿನ್ ನೋವು  ನಿವಾರಕ
ಸಂಶೋಧನೆಗಳು  ಬೇಡವೆಂದಿವೆ
ಬೇರೆ  ದೇಶಗಳು
ಮೂಗು ಮುರಿದಿವೆ
ಭಾರತ ಸರ್ಕಾರ ನಿಷೇಧಿಸಿದೆ
ಹಳ್ಳಿಯ ಅಂಗಡಿಯಲ್ಲಿ
ಹಳೇ ವೈದ್ಯನ  ಕೈಯಲ್ಲಿ
ಅನಾಲ್ಜಿನ್ ಇನ್ನೂ ನಗುತ್ತಿದೆ

ಸಂಶೋಧನೆಗಳು  ಮೊದಲು
ಹುಡುಕಿ ಶೋಧಿಸಿ ಬೇಕೆಂದವು
ಈಗ ಅದರೊಳಗಿದ್ದುದ್ದನ್ನ ಕೆದಕಿ
ಬೇಡ ಎನ್ನುತ್ತಿವೆ
ಇಲ್ಲಿಯವರಿಗೆ ನುಂಗಿದವರ ನಷ್ಟಕೆ
ಹೊಣೆ ಯಾರು ?

ಇದಾವ ಪರಿವೆಯಿಲ್ಲದೆ
ಹೊಸ ರೋಗಕೆ
ಹಳೆ ಮುದುಕಿ ಮದ್ದರೆಯುತ್ತಿದ್ದಳು !

  ಡಾ. ನಾಗೇಂದ್ರ  ಮಲ್ಲಾಡಿಹಳ್ಳಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ