ಸೋಮವಾರ, ಜುಲೈ 15, 2013

ವಿಮರ್ಶೆ

ಒಬ್ಬೊಬ್ಬರನ್ನ
ತಕ್ಕಡಿಯಲ್ಲಿ ಹಾಕಿ
ತೂಗಿದರೂ ..
ಅವರವರ  ಭಾರ
ಅವರವರಿಗೆ !

ಅವರು ಅವರೇ
ಇವರು ಅವರಂತಾಗಲಿಲ್ಲ

ಕಣ್ಣಿಗೆ ಕಂಡ ಕೋನದಲ್ಲಿ
ಅಳೆದರೂ
ಕಾಣದ ಕೋನಕ್ಕೆ
ಕನ್ನಡಕ ಬೇಕೆ ?

ಮುನಿಸು 

ಮಾತು ಮಾತನ್ನ; 
ನುಂಗಿ
 ಮುಖ -ಸೋರೆಕಾಯಿ 
 
 
ಒಂದು ಕರಿ ಬೆಕ್ಕು

ಒಂದು ದಿನ
ದಾರಿ ಮದ್ಯ
ಕರಿ ಬೆಕ್ಕು
ಸಿಕ್ಕಿತು

ಮನೆಗೆ ತಂದೆ
ಹಾಲಿಕ್ಕಿದೆ
ಮೈ ಸವರಿದೆ
ಸುಮ್ಮನಾದೆ

ಮನೆಯವರೆಲ್ಲ
ಮೂಗು ಮುರಿದರು
ಅದನ್ನು ಓಡಿಸಲು
ಪ್ರಯತ್ನಿಸಿದರು

ಬೆಕ್ಕು
ಜಾಗ ಬಿಡಲಿಲ್ಲ
ದಿನಕಳೆಯಿತು
ಬೆಕ್ಕೂ ಬಲಿಯಿತು

ಕಾಲ ಗರ್ಭದಲಿ
ಎಲ್ಲಾ ಕರಗಿತು
ಮನೆಯವರೆಲ್ಲಾ
ಹಾಲಿಟ್ಟು
ಎಲ್ಲಿದ್ದಿಯಾ ಟಾಮಿ  ಎಂದರು 



 

ಬುಧವಾರ, ಜುಲೈ 10, 2013

ಉತ್ತರ  ಹುಡುಕುತ್ತಾ ..... 

ಪಂಚಮಹಾಭೂತಗಳ  ನೆರಳಲ್ಲಿ
ತ್ರಿದೋಷ  ತಿಳಿಯಲಿಲ್ಲ
ಯಾರು ತಿಳಿಸಲಿಲ್ಲ
ತಿಳಿಸಲು ಅವರಿಗೆ
ಗೊತ್ತಿತ್ತೋ ಇಲ್ಲವೊ

ಆದರೂ  ತ್ರಿದೋಷಗಳ
ಗಂಟಲಲ್ಲಿ ಇಳಿಸಿ
ಕುಡಿದು
ಪರೀಕ್ಷೆ ಬರೆದು
ಪಾಸಾದೆ

ಸೂಜಿ ಹಿಡಿದು
ಎಲ್ಲಾ ಮರೆತೆ

ಮೊನ್ನೆ ತಮಿಳುನಾಡಿನ
ಟ್ರಿನಿಂಗ್ ನಲ್ಲಿ
ಮತ್ತೆ ತ್ರಿದೋಷ
ಪಂಚಕರ್ಮ ಎಂದರು

ಮತ್ತೆ ತಡಕಾಡಿದೆ
ಅವರವರ
ಜುಟ್ಟಿನಲ್ಲಿ
ತ್ರಿದೋಷಗಳು ಅಲ್ಲಾಡಿದವು
ಕಾಣಿಸಲಿಲ್ಲ

ಪಿ. ಹೆಚ್.ಡಿ.  ಆದವ
ಪರದಾಡುತ್ತಿದ್ದ
ತ್ರಿದೋಷಗಳಲ್ಲೇ
ತಿಣುಕಾಡುತಿದ್ದ
ಹಸಿರು ಉಸಿರಾಡುತಿತ್ತು
ಅರ್ಥ ಅಗದಿದ್ದೆ
ಆಯುರ್ವೇದ
ಅರ್ಥ ಆಗಿದ್ದು  ಅಲೋಪಥಿ
ಕ್ಷಣಿಕ ಸುಖಕ್ಕೆ
ಸುಮ್ಮನಾದೆ

ಗುರುವಿಲ್ಲ
ಗುರಿಯಿಲ್ಲ
ತ್ರಿದೋಷಗಳು ಇವೆಯೇ  ಇಲ್ಲವೇ?
ತಕರಾರು ಬೇಡ
ಪರೀಕ್ಷೆ ಬರೆಯಲು ಹುಡುಗ
ಜೆರಾಕ್ಸ್ ನೋಟ್ಸ್ ನ
ದೂಳು ಕೊಡವುತ್ತಿದ್ದ !

ಪ್ರಶ್ನೆಗೆ ಉತ್ತರ
ಉತ್ತರಕ್ಕೆ ಮತ್ತೆ  ಪ್ರಶ್ನೆಯೇ?



 

ಮಂಗಳವಾರ, ಜುಲೈ 9, 2013

ಮಂಚದ
ಮುಕ್ಕಾಲು
ಬೆಡ್ ನಲ್ಲಿ
ಅoಗಾತ
ಮಲಗಿದರೂ
ಹೊರಳಾಡಿದರು
ಅವಳು
ಬರಲಿಲ್ಲ .... !
 

ಗುರುವಾರ, ಜುಲೈ 4, 2013

chittaara

ಚಿತ್ತಾರ

 ದೇಹ  ಬಾಗಿದಾಗ
ಮನಸು ಮಾಗಿದಾಗ
ಚಿತ್ತವೆಲ್ಲವು ಅವನತ್ತ


ಯೌವನ ಪುಟಿಯುತಿರಲು
ಆಸೆ ಅರಳುತ್ತಿರಲು
ನೋಟವೆಲ್ಲವು  ಅವಳತ್ತ

ಕoಡದ್ದನ್ನು ಕಣ್ಣಲ್ಲಿ  ಕಟ್ಟಿಕೊoಡು
ಮನಸ  ಮೂಸೆಯಲ್ಲಿ   ಕರಗಿಸಿ
ಕೈ ತೋರಿದರು  ಕನ್ನಡದತ್ತ




 

ಸೋಮವಾರ, ಜುಲೈ 1, 2013

rastegalu

ರಸ್ತೆಗಳು

ನೀಟಾದ  ಉಬ್ಬಿದ  ತಗ್ಗಿದ
ಸೀಳಾದ  ಕೊರೆದ
ಮಧ್ಯ ಮಧ್ಯ ತೇಪೆ  ಹಚ್ಚಿದ
ರಸ್ತೆಗಳೇ ಹಾಗೆ

ಹಳೆ ಮುದುಕಿಯ ಸೀರೆಯ
ಕರಿ ತೇಪೆಗಗಳ೦ತೆ

ಒ೦ದೇ ರಸ್ತೆ
ಮುoದೆ  ಮೂರಾಗಿ  ನೂರಾಗಿ
ಕೊನೆಗೆ ಒoದಾಗಿ
ಮುಕ್ತಿ ಪಡೆದoತೆ
 

rastegalu

ರಸ್ತೆಗಳು

ನೀಟಾದ  ಉಬ್ಬಿದ  ತಗ್ಗಿದ
ಸೀಳಾದ  ಕೊರೆದ
ಮಧ್ಯ ಮಧ್ಯ ತೇಪೆ  ಹಚ್ಚಿದ
ರಸ್ತೆಗಳೇ ಹಾಗೆ

ಹಳೆ ಮುದುಕಿಯ ಸೀರೆಯ
ಕರಿ ತೇಪೆಗಗಳ೦ತೆ

ಒ೦ದೇ ರಸ್ತೆ
ಮುoದೆ  ಮೂರಾಗಿ  ನೂರಾಗಿ
ಕೊನೆಗೆ ಒoದಾಗಿ
ಮುಕ್ತಿ ಪಡೆದoತೆ