ಉತ್ತರ ಹುಡುಕುತ್ತಾ .....
ಪಂಚಮಹಾಭೂತಗಳ ನೆರಳಲ್ಲಿ
ತ್ರಿದೋಷ ತಿಳಿಯಲಿಲ್ಲ
ಯಾರು ತಿಳಿಸಲಿಲ್ಲ
ತಿಳಿಸಲು ಅವರಿಗೆ
ಗೊತ್ತಿತ್ತೋ ಇಲ್ಲವೊ
ಆದರೂ ತ್ರಿದೋಷಗಳ
ಗಂಟಲಲ್ಲಿ ಇಳಿಸಿ
ಕುಡಿದು
ಪರೀಕ್ಷೆ ಬರೆದು
ಪಾಸಾದೆ
ಸೂಜಿ ಹಿಡಿದು
ಎಲ್ಲಾ ಮರೆತೆ
ಮೊನ್ನೆ ತಮಿಳುನಾಡಿನ
ಟ್ರಿನಿಂಗ್ ನಲ್ಲಿ
ಮತ್ತೆ ತ್ರಿದೋಷ
ಪಂಚಕರ್ಮ ಎಂದರು
ಮತ್ತೆ ತಡಕಾಡಿದೆ
ಅವರವರ
ಜುಟ್ಟಿನಲ್ಲಿ
ತ್ರಿದೋಷಗಳು ಅಲ್ಲಾಡಿದವು
ಕಾಣಿಸಲಿಲ್ಲ
ಪಿ. ಹೆಚ್.ಡಿ. ಆದವ
ಪರದಾಡುತ್ತಿದ್ದ
ತ್ರಿದೋಷಗಳಲ್ಲೇ
ತಿಣುಕಾಡುತಿದ್ದ
ಹಸಿರು ಉಸಿರಾಡುತಿತ್ತು
ಅರ್ಥ ಅಗದಿದ್ದೆ
ಆಯುರ್ವೇದ
ಅರ್ಥ ಆಗಿದ್ದು ಅಲೋಪಥಿ
ಕ್ಷಣಿಕ ಸುಖಕ್ಕೆ
ಸುಮ್ಮನಾದೆ
ಗುರುವಿಲ್ಲ
ಗುರಿಯಿಲ್ಲ
ತ್ರಿದೋಷಗಳು ಇವೆಯೇ ಇಲ್ಲವೇ?
ತಕರಾರು ಬೇಡ
ಪರೀಕ್ಷೆ ಬರೆಯಲು ಹುಡುಗ
ಜೆರಾಕ್ಸ್ ನೋಟ್ಸ್ ನ
ದೂಳು ಕೊಡವುತ್ತಿದ್ದ !
ಪ್ರಶ್ನೆಗೆ ಉತ್ತರ
ಉತ್ತರಕ್ಕೆ ಮತ್ತೆ ಪ್ರಶ್ನೆಯೇ?
ಪಂಚಮಹಾಭೂತಗಳ ನೆರಳಲ್ಲಿ
ತ್ರಿದೋಷ ತಿಳಿಯಲಿಲ್ಲ
ಯಾರು ತಿಳಿಸಲಿಲ್ಲ
ತಿಳಿಸಲು ಅವರಿಗೆ
ಗೊತ್ತಿತ್ತೋ ಇಲ್ಲವೊ
ಆದರೂ ತ್ರಿದೋಷಗಳ
ಗಂಟಲಲ್ಲಿ ಇಳಿಸಿ
ಕುಡಿದು
ಪರೀಕ್ಷೆ ಬರೆದು
ಪಾಸಾದೆ
ಸೂಜಿ ಹಿಡಿದು
ಎಲ್ಲಾ ಮರೆತೆ
ಮೊನ್ನೆ ತಮಿಳುನಾಡಿನ
ಟ್ರಿನಿಂಗ್ ನಲ್ಲಿ
ಮತ್ತೆ ತ್ರಿದೋಷ
ಪಂಚಕರ್ಮ ಎಂದರು
ಮತ್ತೆ ತಡಕಾಡಿದೆ
ಅವರವರ
ಜುಟ್ಟಿನಲ್ಲಿ
ತ್ರಿದೋಷಗಳು ಅಲ್ಲಾಡಿದವು
ಕಾಣಿಸಲಿಲ್ಲ
ಪಿ. ಹೆಚ್.ಡಿ. ಆದವ
ಪರದಾಡುತ್ತಿದ್ದ
ತ್ರಿದೋಷಗಳಲ್ಲೇ
ತಿಣುಕಾಡುತಿದ್ದ
ಹಸಿರು ಉಸಿರಾಡುತಿತ್ತು
ಅರ್ಥ ಅಗದಿದ್ದೆ
ಆಯುರ್ವೇದ
ಅರ್ಥ ಆಗಿದ್ದು ಅಲೋಪಥಿ
ಕ್ಷಣಿಕ ಸುಖಕ್ಕೆ
ಸುಮ್ಮನಾದೆ
ಗುರುವಿಲ್ಲ
ಗುರಿಯಿಲ್ಲ
ತ್ರಿದೋಷಗಳು ಇವೆಯೇ ಇಲ್ಲವೇ?
ತಕರಾರು ಬೇಡ
ಪರೀಕ್ಷೆ ಬರೆಯಲು ಹುಡುಗ
ಜೆರಾಕ್ಸ್ ನೋಟ್ಸ್ ನ
ದೂಳು ಕೊಡವುತ್ತಿದ್ದ !
ಪ್ರಶ್ನೆಗೆ ಉತ್ತರ
ಉತ್ತರಕ್ಕೆ ಮತ್ತೆ ಪ್ರಶ್ನೆಯೇ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ