ಸೋಮವಾರ, ಜುಲೈ 15, 2013

ಒಂದು ಕರಿ ಬೆಕ್ಕು

ಒಂದು ದಿನ
ದಾರಿ ಮದ್ಯ
ಕರಿ ಬೆಕ್ಕು
ಸಿಕ್ಕಿತು

ಮನೆಗೆ ತಂದೆ
ಹಾಲಿಕ್ಕಿದೆ
ಮೈ ಸವರಿದೆ
ಸುಮ್ಮನಾದೆ

ಮನೆಯವರೆಲ್ಲ
ಮೂಗು ಮುರಿದರು
ಅದನ್ನು ಓಡಿಸಲು
ಪ್ರಯತ್ನಿಸಿದರು

ಬೆಕ್ಕು
ಜಾಗ ಬಿಡಲಿಲ್ಲ
ದಿನಕಳೆಯಿತು
ಬೆಕ್ಕೂ ಬಲಿಯಿತು

ಕಾಲ ಗರ್ಭದಲಿ
ಎಲ್ಲಾ ಕರಗಿತು
ಮನೆಯವರೆಲ್ಲಾ
ಹಾಲಿಟ್ಟು
ಎಲ್ಲಿದ್ದಿಯಾ ಟಾಮಿ  ಎಂದರು 



 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ