ಸೋಮವಾರ, ಜನವರಿ 28, 2013

ಕತ್ತಲು ಕಳಚಿತು

ಬಣ್ಣ ಬಣ್ಣದ
ಭಾವನೆಗಳ ಹೆಕ್ಕಿ
ಪೆನ್ನಿನ ಮುಖಕೆ  ಮೆತ್ತಿ
ಪದ ಪದ  ಸೋಸಿ
ಪತ್ರ ಬರೆದೆ

ಮುದ್ದು ಮುಖ ನೋಡಿ
ಮನಸ್ಸಿನಲ್ಲಿದುದ್ದನ್ನು ಗೀಚಿ
ಇಂಟರನೆಟ್ನಲ್ಲಿ ಇಳಿದು
ಮೇಲ್ ಮಾಡಿದೆ

ಅಂತರಂಗದ ತರಂಗಗಳ
ಅವುಚಿ ಹಲೋ ಎಂದೆ
ಕಿವಿ ಅಗಲಿಸಿ
ಎಲ್ಲ ಕೇಳಿದೆ

ಫೇಸ್ ನೋಡದೆ
ಫೇಸ್ ಬುಕ್ ನಲ್ಲಿ  ಪೋಸ್ಟ್ ಮಾಡಿ
ನಿನ್ನ ಅಂಟಿನ ನಂಟಿನಲಿ
ಡೌನ್ ಲೋಡ್ ಆದೆ

ವೀಡಿಯೋ ಕಾನ್ಪರೆನ್ಸ್ ನಲ್ಲಿ
ಕಣ್ಣಲ್ಲಿ ಕಣ್ಣಿಟ್ಟು
ನಿನ್ನ ಪ್ರೀತಿ ದಡದಲಿ ನಿಂತು
ಮನಬಿಚ್ಚಿ ಮಾತನಾಡಿದೆ

ಒಮ್ಮೆ 
ಮೀಟ್ ಮಾಡೋಣ ಅಂತ
ಮೆಟ್ರೋ ಹತ್ತಿದೆ
ಕತ್ತಲು  ಕಳಚಿತು
ಮಾಗಿ ಕನಸು ಮೈ ಮುರಿಯಿತು .
                                               ಡಾ .ನಾಗೇಂದ್ರ ಮಲ್ಲಾಡಿಹಳ್ಳಿ

 

ಶುಕ್ರವಾರ, ಜನವರಿ 25, 2013

ದಾವಣಗೆರೆಯ  ಒಂದು  ಸಂಜೆ ......

 
ಮುತ್ಸಂಜೆ  ಮುರಿದು ಬೀಳುತಿರೆ
ರೈಲ್ವೆ ಸ್ಟೇಷನ್ನಲ್ಲಿ 
ಕಿಕ್ಕಿರಿದ ಜನ 
ಕಪ್ಪು ಹುಡಿಗಾಗಿ  ಕಾಯುತಿರೆ 
ಹಸಿರು ಚಪ್ಪರ 
ಹಾಸಿದಂಗೆ  ಗಿಳಿಗಳು 
ಗೂಡು ಸೇರುತಿರೆ 
ವಿದ್ಯಾರ್ಥಿಭವನದ  ಮುಂದೆ 
ಹಸಿ ಲವ್ ಲೆಟರ್ ಹಾರಡುತಿರೆ  
ಬಾಪೂಜಿ ಅಸ್ಪತ್ರೆಯಲಿ 
ಉಸಿರುಗಟ್ಟಿ ಒದ್ದಾಡುತಿರೆ 
ಬಸ್ ನಿಲ್ದಾಣದಲಿ 
ಹಿಟ್ಟು ಬಟ್ಟೆಗಾಗಿ 
ಸುಟ್ಟ ತಿಕ ನೆಲಕ್ಕಾಕಿ 
ಭಿಕ್ಷೆ ಬೇಡುತಿರೆ  
ಚನ್ನಬಸಪ್ಪನ ಮಾಲ್ ನಲ್ಲಿ 
ಚಲುವೆಯರು ಸೀರೆ 
ಉಟುಟ್ಟು ನೋಡುತಿರೆ 
ರಾಜಭವನದಲಿ  ಗುಂಡಾಕಿ  
ತುಂಡಿಗಾಗಿ ತಡಕಾಡುತಿರೆ 
ಕಿಸಿದ ನಗು 
ಬಿಗಿದ ಬ್ರಾ 
ಹಸಿದವನು ಕಾತರದಿ ಕಾಯುತಿರೆ 
ಕೆಂಪು ಸೂರ್ಯ 
ಕಣ್ಮುಚಿದ .                             ಡಾ .ನಾಗೇಂದ್ರ  

ಗುರುವಾರ, ಜನವರಿ 24, 2013

palasha

ಪಲಾಶ  ಚಂದ್ರನಿಗೆ  ಪ್ರಿಯವಾಗಿದೆ .ಚಂದ್ರಗ್ರಹ  ಶಾಂತಿ ಹೋಮಕ್ಕೆ  ಪಲಾಶ  ಸಮಿತ್ ಗಳು ಬೇಕು .ಅಶ್ವಿನಿ ನಕ್ಷತ್ರದ  ಸೆಪ್ಟಂಬರ್ -ಅಕ್ಟೋಬರ್ ಸಮಯದಲ್ಲಿ  ಪಲಾಶ ಮರದ ಬೇರನ್ನು ಸಂಗ್ರಹಿಸಿ ಪುರುಷನ ತೋಳಿಗೆ ಕಟ್ಟಿದರೆ ಆ  ಪುರುಷ ಸ್ಪರ್ಶಿಸುವ ಎಲ್ಲಾ ಹೆಣ್ಣುಗಳು ಅವನ  ವಶವಾಗುವರು  ಎಂಬ ಮಾತಿದೆ .

ಬುಧವಾರ, ಜನವರಿ 23, 2013

bhuvana sundari

ಭುಮಿಯಲೊಬ್ಬ ಬ್ರಹ್ಮ

ಸಂಕ್ರಾಂತಿ ಸರಿಯುತ್ತಿದಂತೆ ಸೂರ್ಯ ಮುಖ ತಿರುಗಿಸಿದ. ಬಿಸಿಲು ಬಾಯಿ ಬಿಟ್ಟಿತು .ಉರಿಯುವ ಬಿಸಿಲಲ್ಲೂ ಕಾಡಿನ ಕೆಂಪು ಸುಂದರಿ ನಗುತಿದ್ದಳು ,ಅವಳೇ ಮುತ್ತುಗ ! ಜನವರಿಯಿಂದ ಮಾರ್ಚ್
ತಿಂಗಳುಗಳ ಕಾಲದಲ್ಲಿ ಮುತ್ತುಗದ ಹೂ ನೋಡಲು ಚೆಂದ .ಆರೆಂಜ್ ಬಣ್ಣದ ಸೀರೆಯುಟ್ಟ ಭೂತಾಯಿಯನ್ನು ನೋಡಿದವನೆ ಧನ್ಯ .ಮುತ್ತುಗವನ್ನು ಬ್ರಹ್ಮವೃಕ್ಷ ಎನ್ನುವರು .
ಯಜ್ಞ ಯಾಗಗಳನ್ನು ಮಾಡಲು ಮುತ್ತುಗ ಮರದಿಂದ ತಯಾರಿಸಿದ ಪರಿಕರಗಳು ಬೇಕು .ಹೋಮ ಹವನಗಳಲ್ಲು ಮುತ್ತುಗದ ಸಮಿತ್ ಗಳು ಬೇಕು .ಮುತ್ತುಗದ ಮರಕ್ಕೆ ಸಂಸ್ಕೃತದಲ್ಲಿ ಪಲಾಶ ಎಂದು ಕರೆಯುವರು .

ಮಂಗಳವಾರ, ಜನವರಿ 22, 2013