ದಾವಣಗೆರೆಯ ಒಂದು ಸಂಜೆ ......
ಮುತ್ಸಂಜೆ ಮುರಿದು ಬೀಳುತಿರೆ
ರೈಲ್ವೆ ಸ್ಟೇಷನ್ನಲ್ಲಿ
ಕಿಕ್ಕಿರಿದ ಜನ
ಕಪ್ಪು ಹುಡಿಗಾಗಿ ಕಾಯುತಿರೆ
ಹಸಿರು ಚಪ್ಪರ
ಹಾಸಿದಂಗೆ ಗಿಳಿಗಳು
ಗೂಡು ಸೇರುತಿರೆ
ವಿದ್ಯಾರ್ಥಿಭವನದ ಮುಂದೆ
ಹಸಿ ಲವ್ ಲೆಟರ್ ಹಾರಡುತಿರೆ
ಬಾಪೂಜಿ ಅಸ್ಪತ್ರೆಯಲಿ
ಉಸಿರುಗಟ್ಟಿ ಒದ್ದಾಡುತಿರೆ
ಬಸ್ ನಿಲ್ದಾಣದಲಿ
ಹಿಟ್ಟು ಬಟ್ಟೆಗಾಗಿ
ಸುಟ್ಟ ತಿಕ ನೆಲಕ್ಕಾಕಿ
ಭಿಕ್ಷೆ ಬೇಡುತಿರೆ
ಚನ್ನಬಸಪ್ಪನ ಮಾಲ್ ನಲ್ಲಿ
ಚಲುವೆಯರು ಸೀರೆ
ಉಟುಟ್ಟು ನೋಡುತಿರೆ
ರಾಜಭವನದಲಿ ಗುಂಡಾಕಿ
ತುಂಡಿಗಾಗಿ ತಡಕಾಡುತಿರೆ
ಕಿಸಿದ ನಗು
ಬಿಗಿದ ಬ್ರಾ
ಹಸಿದವನು ಕಾತರದಿ ಕಾಯುತಿರೆ
ಕೆಂಪು ಸೂರ್ಯ
ಕಣ್ಮುಚಿದ . ಡಾ .ನಾಗೇಂದ್ರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ