ಪುರಾತನ ಪಂಡಿತನಿಗೆ ಪುಷ್ಟಿ !
ಆಯುರ್ವೇದ ಪುರಾತನ ವೈದ್ಯ ಪದ್ಧತಿ .ಹಲವು ವೈದ್ಯ ಪದ್ದತಿಗಳಿಗೆ ತಾಯಿ ಇದ್ದಂತೆ . ಮನೆ ಮದ್ದಿನ ಹೆಸಿರಿನಲ್ಲಿ ಎಲ್ಲರ ಆರೋಗ್ಯ ಕಾಪಾಡುವಲ್ಲಿ ಯಶಸ್ವಿಯಾಗಿದೆ .ಅಡ್ಡಪರಿಣಾಮಗಳಲಿಲ್ಲದ ಕಾರಣ ಮತ್ತು ಸವಾಲೊಡ್ಡುವ ರೋಗಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಈ ಪದ್ದತಿ ಅಭಿರುದ್ದಿಯಾಗಲು ಪ್ರೋತ್ಸಾಹದ ಅವಶ್ಯಕತೆ ಇತ್ತು .ಯಾವುದೇ ಪದ್ಧತಿ ಬೆಳೆಯಲು ರಾಜಾಶ್ರಯ ಬೇಕು . ಅದರಂತೆ ಈಗಿನ ಘನ ಸರ್ಕಾರ ಪುರಾತನ ವೈದ್ಯಕೀಯ ಪದ್ದತಿಗೆ ಪ್ರೋತ್ಸಾಹ ನೀಡಿದೆ .
ವೈದ್ಯರಿಲ್ಲದ ,ಸಾರಿಗೆ ಸಂಪರ್ಕ ಕಂಡರಿಯದ ಕುಗ್ರಾಮಗಳಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವ ಆಯುಶ್ ವೈದ್ಯರ ಸೇವೆಯನ್ನು ಪರಿಗಣಿಸಿ ಸರ್ಕಾರ ಆಯುಶ್ ವೈದ್ಯರಿಗೆ ಸೂಕ್ತ ಸ್ಥಾನಮಾನ ನೀಡುವದರೊಂದಿಗೆ ಮತ್ತು ಸುಮಾರು ೧೪೭ ಗುತ್ತಿಗೆ ವೈದ್ಯರ ಸೇವೆಯನ್ನು ಸಕ್ರಮಗೊಳಿಸಿ ಪುರಾತನ ವೈದ್ಯ ಪದ್ದತಿಗೆ ಗೌರವ ನೀಡಿದೆ.
ಈ ವಿಷಯಕ್ಕೆ ಸಂಬದಿಸಿದಂತೆ ಪುರಾತನ ವೈದ್ಯ ಪದ್ದತ್ತಿಗೆ ಪುಷ್ಟಿಕರಣ ನೀಡಿದ ಘನ ಸರ್ಕಾರಕ್ಕೆ
ಮತ್ತು ಎಲ್ಲಾ ಅಧಿಕಾರಿಗಳಿಗೂ ಸಮಸ್ತ ಆಯುಶ್ ವೈದ್ಯರ ಪರವಾಗಿ ಗೌರವ ಪೂರ್ವಕ ಧನ್ಯವಾದಗಳು .
ಡಾ .ನಾಗೇಂದ್ರ ಮಲ್ಲಾಡಿಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ