ಯುಗಾದಿಯ ಮುನ್ನುಡಿ
ಯುಗಾದಿ ಹಬ್ಬವನ್ನು ಕರೆತರಲು ಬೇವು ಹೂ ಬಿಟ್ಟಿದೆ . ಯುಗಾದಿ ಹಬ್ಬದ ದಿನದಂದು ಬೇವು ಬೆಲ್ಲವನ್ನು ಕಷ್ಟ ಸುಖ ಸಂಕೇತವಾಗಿ ಹಂಚಿ ತಿನ್ನುವರು . ಬೇವಿಗೆ ಸಂಸ್ಕೃತದಲ್ಲಿ ನಿಂಬ ಎನ್ನುವರು . ಹಿಂದೆ ಜ್ವರ ಬಂದಾಗ ಬೇವಿನ ಕಷಾಯ ಕುಡಿಸುತ್ತಿದರು .ಯಾವುದೆ ಚರ್ಮ ರೋಗವಿರಲಿ ಅದಕ್ಕೆ ಬೇವು ಸಿದ್ದೌಷಧಿ . ಕ್ರಿಮಿನಾಶಕ ಗುಣವಿರುವುದರಿಂದ ಕ್ರಿಮಿಘ್ನ ,ಕಾಗೆಗಳಿಗೆ ಇದರ ಹಣ್ಣು ಇಷ್ಟ ಅದ್ದರಿಂದ ಕಾಕಪ್ರಿಯ ,ಮರವು ಅಂಟಿ ಅಂಶ ಹೊಂದಿರುವುದರಿಂದ ಹಿಂಗುನಿರ್ಯಾಸ ಎಂಬ ಹೆಸರುಗಳಿವೆ .
ಕಹಿ ಔಷಧಿಗಳ ಸಾಲಿನಲ್ಲಿ ಬೇವು ಪ್ರಮುಖ . ಇದರ ಪ್ರತಿಯೊಂದು ಭಾಗವು ಔಷಧಿ ಗುಣಗಳನ್ನು ಹೊಂದಿದೆ . ಸಾಮಾನ್ಯವಾಗಿ ಬೇವು ಕಫ ಪಿತ್ತ ಶಾಮಕವಾಗಿ
ವಾತವನ್ನು ಹೆಚ್ಚಿಸುವದು . ಕೆಮ್ಮು,ದಮ್ಮು ,ಸಕ್ಕರೆ ಕಾಯಿಲೆ ,ಚರ್ಮರೋಗಗಳು,ಜ್ವರ ಗಾಯಗಳಿಗೆ ಉಪಯೋಗವಾಗುವದು . ಯುಗಾದಿ ಹಬ್ಬದಂದು ಬೇವಿನ ಹೂ ಅಥವಾ ಬೇವಿನ ಚಿಗುರು ಬೆಲ್ಲದ ಜೊತೆ ಸವಿಯುತ್ತೇವೆ .
ಕೋಮಲ ಚಿಗರು ಬಾಯಿ ಸ್ವಚ್ಛಮಾಡಿ ರುಚಿ ಹೆಚ್ಚಿಸುವದು . ಕ್ರಿಮಿನಾಶಕ ,ಜೀರ್ಣಶಕ್ತಿ ವರ್ಧಕ ,ಚರ್ಮರೋಗ ನಿವಾರಕವಾಗಿದೆ . ಹೂ ಸಹ ಪಿತ್ತನಾಶಕ ,ವಾತವರ್ಧಕ, ವಿಷಘ್ನ ,ಕ್ರಿಮಿಘ್ನ ಗುಣಗಳಿಂದ ಕೂಡಿದೆ .
ಚರ್ಮರೋಗಗಳಲಿ ಬೇವಿನ ಎಲೆಗಳನ್ನು ಕುಡಿಸಿದ ನೀರಿನಿಂದ ಸ್ನಾನ ಮಾಡುವರು . ಯುಗಾದಿ ಹಬ್ಬದ ದಿನದಂದು ಕಹಿಯ ಸಂಕೇತವಾಗಿ ಉಪಯೋಗಿಸುವ ಬೇವು ಅನೇಕ ರೋಗಗಳಿಗೆ ಮದ್ದಾಗಿ ರೋಗಿಗೆ ಸಂತೋಷ ನೀಡುವುದು . ಅದರಕ್ಕೆ ಕಹಿ ಉದರಕ್ಕೆ ಸಿಹಿಯಾದ ಬೇವು ಶಕ್ತಿ ದೇವಿಯ ಪೂಜೆಗೆ ಶ್ರೇಷ್ಠ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ