ಸೋಮವಾರ, ಏಪ್ರಿಲ್ 29, 2013


ಮನೆ 

ಸೂರ್ಯನ  ಸಿಟ್ಟು  ಹೀರಿ 

ತನ್ನೊಡೆಯನ  ತಂಪಾಗಿಸುವ 

ಕರಿ ಹೆಂಚಿನ ಮನೆ 

ಬೇಸಿಗೆಯ ನೆಮ್ಮದಿ ಮನೆ

 
ಮನೆ ಹಲವು 

ಹುಲ್ಲಿನ,ಹಾಪಿನ 

ತೆಂಗಿನ ಗರಿಯ 

ಅಡಿಕೆ ದಬ್ಬೆಯ 

ಲಕ್ಕಿಯ,ಬಿದುರಿನ 

ಮಣ್ಣಿನ,ಕಲ್ಲಿನ

ಕರಿ,ಕೆಂಪು ಹೆಂಚಿನ 

ಕಬ್ಬಿಣ,ಸಿಮೆಂಟಿನ

RCC ಯ ಅರಮನೆ !

 

ಭೂತಾಯ ಮಡಿಲಲಿ 

ಆಗಸವ ಹೊದ್ದು 

ಮಲಗಿದವನ ಮನೆ 

ಆನಂದದ ಮನೆ 

ಎಲ್ಲರಿರುವುದು

 ಬಾಡಿಗೆ ಮನೆ 

ಲಕ್ಷ ,ಕೋಟಿ ಹಾಕಿ 

ಬಡಿದಾಡಿ ಕಟ್ಟುವರು 

ಬಹುಮಹಡಿ ಭ್ರಾಂತಿ ಮನೆ

 ಅದು ನಮ್ಮನೆ

ಇದು ನಿಮ್ಮನೆ 

 ಅಲ್ಲಿರುವನು ಸುಮ್ಮನೆ !

 

ಡಾ . ನಾಗೇoದ್ರ  ಮಲ್ಲಾಡಿಹಳ್ಳಿ

 
 
 





 

ಮಳೆ 

ಮೋಡದ  ನೆಲದಲ್ಲಿ 

ಮಿಂಚಿನ  ರಂಗವಲ್ಲಿ 

ಗುಡುಗಿನ ವಾದ್ಯ 

ಆಲಿಕಲ್ಲಿನ ಅಕ್ಷತೆ 

ಮಳೆಯ ಮೆರವಣಿಗೆ 

ಭಾನುವಾರ, ಏಪ್ರಿಲ್ 28, 2013

ನಾಯಕ-ಕಾಯಕ

ಚುನಾವಣೆಗೆ ಮುನ್ನ
ನಾಯಿಯಂತೆ
ಹಿಂಡು ಕಟ್ಟಿಕೊಂದು
ಮನೆ ಮನೆಗೊ
ಮತ ಯಾಚಿಸುವವನೆ
ನಾಯಕ

ಚುನಾವಣೆ ನಂತರ
ಹುಚ್ಚು ನಾಯಿತರ
ಗೆದ್ದ ನಾಯಕನನ್ನು
ಹುಡುಕುವುದೇ ...
ಮತ ಕೊಟ್ಟವನ
ಕಾಯಕ !
ಡಾ. ನಾಗೇoದ್ರ ಮಲ್ಲಾಡಿಹಳ್ಳಿ
ನಾಯಕ-ಕಾಯಕ

ಚುನಾವಣೆಗೆ ಮುನ್ನ
ನಾಯಿಯಂತೆ
ಹಿಂಡು ಕಟ್ಟಿಕೊಂದು
 ಮನೆ ಮನೆಗೊ
ಮತ ಯಾಚಿಸುವವನೆ
ನಾಯಕ

ಚುನಾವಣೆ ನಂತರ
ಹುಚ್ಚು ನಾಯಿತರ
ಗೆದ್ದ ನಾಯಕನನ್ನು
ಹುಡುಕುವುದೇ ...
ಮತ ಕೊಟ್ಟವನ
ಕಾಯಕ !


 

ಗುರುವಾರ, ಏಪ್ರಿಲ್ 25, 2013

ಹದ್ದಿನ ಕಣ್ಣು

ಚುನಾವಣ ಆಯೋಗದ
ಹದ್ದಿನ ಕಣ್ಣು
ಅಕ್ರಮಗಳಿಗೆ
ತಿನ್ನಲಾರದ ಗಿಣ್ಣು

ಅಬ್ಬರದ ಪ್ರಚಾರವಿಲ್ಲ್ಲ
ಸೀರೆ,ಪಂಚೆಯ ಸುಗ್ಗಿಯಿಲ್ಲ
ನಾಲಿಗೆಗೂ ತಿರುವುಗಳಿಲ್ಲ
ಹಂಚುವ ಹಣಕ್ಕೂ ಕತ್ತರಿ

ಮದ್ಯದ ಮಳಿಗೆಗೆ
ಸಿ ಸಿ ಟೀವಿ ಕ್ಯಾಮರ
ಸಂಜೆ ಸಲ್ಲಿಸಬೇಕು
ಕುಡುಕನ ಗಣಿತ
ನುಸುಳುವ ಸಂತ್ರಾ,ಪೆನ್ನಿಗೂ ತಡೆ

ಮತ್ತೂ, ಹಿಡಿಯಬೇಕು
ರಂಗೋಲಿ ಕೆಳಗೆ ನುಸುಳುವರನ್ನ
ಆಮಿಷಗಳ ಅಳಿಸಿ
ಪ್ರತಿ ಮನೆಯಲ್ಲೂ ಬೆಳಸಿ
ಮತದಾನ ಜಾಗೃತಿ

ಉತ್ತಮರಿಗೆ ನಿಮ್ಮ
ಅಮೂಲ್ಯ ಮತ
ಅದುವೇ ಶ್ರೇಷ್ಠದಾನ
ನಿಮ್ಮ ಊರಾಗುವದು
ಹೊನ್ನಿನ ವನ

ಚುನಾವಣೆಗೊಮ್ಮೆ
 ಬಂದು ಹೋಗದಿರಲಿ
ಹದ್ದಿನ ಕಣ್ಣು 
ನಿತ್ಯವಿರಲಿ ನೀತಿಸಂಹಿತೆ





 

ಮಳೆ

ಮೋಡದ ನೆಲದಲ್ಲಿ
ಮಿಂಚಿನ ರಂಗವಲ್ಲಿ
ಗುಡುಗಿನ ವಾದ್ಯ
ಮಳೆಯ ಮೆರವಣಿಗೆ

 ಹೆಪ್ಪುಗಟ್ಟಿದ ಕತ್ತಲು
ಮಳೆ ಬಿದ್ದ ನೆಲ
ಸುವಾಸೆನೆಯ ಅಮಲು
ಸಿಡಿಲಿನ ಅಬ್ಬರ
ಮಧ್ಯರಾತ್ರಿ ಮೈ ತೊಳೆಯಿತು

 ಬದುಕಿನ ಬುಡಕೆ
ಜೀವ ರಸ
ಮರ ಗಿಡಗಳಲಿ
ನವ ಚೈತನ್ಯ
ಭೂತಾಯಿಗೆ ಅಮೃತಪಾನ .

 

 

ಗುರುವಾರ, ಏಪ್ರಿಲ್ 11, 2013

huri bisilu-hunase chiguru


ಉರಿ ಬಿಸಿಲು -ಹುಣಸೆ ಚಿಗುರು

ಭೂಮಿಯೇ ಬಾಯಿ ಬಿಟ್ಟು ನೀರು ಎನ್ನುವಂತ ಬಿರು ಬಿಸಿಲು ! ಮಳೆ ಮುಗಿಲು ಸೇರಿದೆ . ಬಿಸಿಲ ಧಗೆಗೆ ನೀರು ಕುಡಿ ಕುಡಿದು ಸಾಕಾಗಿದೆ . ಊಟ ರುಚಿಸುವುದಿಲ್ಲ . ಪ್ರಕೃತಿಯ ಪಾಕ ಶಾಲೆಯಲ್ಲಿ ಕಾಲಕ್ಕೆ ತಕ್ಕಂತೆ ಆಹಾರ  ತಯಾರಿಸುತ್ತದೆ. ಸೂಕ್ಷ್ಮ ಬುದ್ದಿಯಿಂದ ಅರಿತು ಅದರಂತೆ ನಡೆದರೆ ಆಹಾರವು ರುಚಿಸುವುದು ,ಆರೋಗ್ಯವು ಸುಧಾರಿಸುವುದು . ಉರಿ ಬಿಸಿಲಿನಲ್ಲಿ ಹುಣಸೆ ಮರ ಚಿಗುರಿದೆ . ಹಸಿರು ,ತಾಮ್ರ ವರ್ಣದ ಕೋಮಲ ಚಿಗುರು ಬೇಸಿಗೆಯ ಸ್ವಾದಿಷ್ಟ ಅಡುಗೆಯ ಒಂದು ಭಾಗವಾಗಿದೆ . ಕೆಲವರಿಗೆ ಗೊತ್ತಿರಲಿಕ್ಕಿಲ್ಲ , ಆದರೆ ತಮಿಳುನಾಡು ,ಆಂಧ್ರ ಪ್ರದೇಶಗಳಲ್ಲಿ ಹುಣಸೆ ಚಿಗುರಿನ ಸಾರು,ರಸಮ್ ,ಪುಳಿಯೊಗರೆ ,ಚಿತ್ರಾನ್ನ ಮಾಮೂಲಿ.

 

ಸಂಸ್ಕೃತದಲಿ ಚಿಂಚ ,ಹಿಂದಿಯಲಿ ಹಿಮ್ಲಿ ,ತೆಲುಗಿನಲ್ಲಿ ಚಿಂತಪಂಡು ,ಇಂಗ್ಲೀಷ್ನಲಿ tamarind tree ಎಂದು ಕರೆಯುವ ಹುಣಸೆ ಮರದ ವೈಜ್ಞಾನಿಕ ಹೆಸರು Tamarindus indica .fabeceae ಸಸ್ಯ ವರ್ಗಕ್ಕೆ ಸೇರಿದೆ . ಹುಣಸೆ ಮರದ ಎಲ್ಲಾ ಭಾಗಗಳು ಔಷಧಿ ಗುಣ ಹೊಂದಿವೆ .

ಚಿಗುರು,ಮೊಗ್ಗು ಮತ್ತು ಹೂ ಸೊಪ್ಪಿನ ಸಾರಿನಂತೆ ಉಪಯೋಗಿಸಬಹುದು . ಹುಣಸೆಯ ಹುಳಿ ರಸವು ಬಾಯಿಯನ್ನು ಸ್ವಚ್ಚಗೊಳಿಸುವದು . ಆಹಾರವನ್ನು ರುಚಿಸುವಂತೆ ಮಾಡುವುದು . ಹಸಿವು,ಜೀರ್ಣ ಶಕ್ತಿಯನ್ನು ಹೆಚ್ಚಿಸುವುದು .ಬೇಸಿಗೆ ದಿನಗಳಲಿ ಸಿಗುವ ಚಿಗುರು ಶರೀರಕ್ಕೆ ತಂಪು ನೀಡುವುದು. ಅದ್ದರಿಂದ ಅನುಭವಿಗಳು ಚಿಗುರಿನ ಸಾರನ್ನು ಇಷ್ಟಪಟ್ಟು ತಿನ್ನುವರು .ಔಷಧಿ ರೂಪದಲಿ ಬಳಕೆಯಾಗುವ ಚಿಗುರು ಸುಟ್ಟ ಗಯಾಗಳಿಗೆ ಉತ್ತಮ ಔಷಧಿಯಾಗಿದೆ .

ನೀವು ಪ್ರಯತ್ನ ಮಾಡಿ :

ಹುಳಿ ಸೊಪ್ಪು :

ಬೇಕಾಗುವ ಸಾಮಗ್ರಿಗಳು

ಪಾಲಕ್ ಸೊಪ್ಪು ,ಮೆಂತೆ ಸೊಪ್ಪು , ಹುಣಸೆ ಚಿಗುರು ,ತೊಗರಿಬೇಳೆ ,ಈರುಳ್ಳಿ 2 ,ಟಮೆಟೋ 2 ,ಮೆಣಸಿನಕಾಯಿ 6 , ಬದನೆ ಕಾಯಿ 1 ,ಬೆಳ್ಳುಳ್ಳಿ ಮಧ್ಯಮ ಗಾತ್ರದ್ದು 1 ,ಹುಣಸೆ ಹಣ್ಣು, ಸಾಂಬರ್ ಪುಡಿ,ಕಾಯಿ ತುರಿ

ಮಾಡುವ ವಿಧಾನ :

ಎಲ್ಲಾ ಸೊಪ್ಪುಗಳನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ . ಕುಕ್ಕರ್ ನಲ್ಲಿ ಹಚ್ಚಿಕೊಂಡ ಈರುಳ್ಳಿ ,

ಟಮೆಟೊ , ಮೆಣಸಿನಕಾಯಿ,ಬದೆನೆಕಾಯಿ ,ಹುಣಸೆಹಣ್ಣು ,ಸಾಂಬರ್ ಪುಡಿ ,ಉಪ್ಪು ,ಕಾಯಿತುರಿ ಮತ್ತು ಸೊಪ್ಪು ಒಂದು ಲೀಟರ ನೀರು ಹಾಕಿ 3 ವಿಶಿಲ್ ಕೂಗಿದ ನಂತರ ಕೆಳಗಿಳಿಸಿ ಮತ್ತೆ ಮಿಶ್ರಣವನ್ನು ಮಸೆದುಕೊಂಡು ಒಗ್ಗರಣೆ ಕೊಟ್ಟರೆ ಹುಳಿ ಸೊಪ್ಪು ರೆಡಿ .  

ಚಿಗುರು ಬೇಳೆ : ಬೇಕಾಗುವ ಸಾಮಗ್ರಿಗಳು

ಒಂದು ಕಪ್ ಎಳೆ ಹುಣಸೆ ಚಿಗುರು, ಎರಡು ಕಪ್ ತೊಗರಿ ಬೇಳೆ                                        

3 ಹಸಿಮೆಣಸಿನ ಕಾಯಿ ,2 ಚಮಚ ಬೆಲ್ಲದ ತುರಿ ,2 ಚಮಚ ಎಣ್ಣೆ ,2 ಒಣಗಿದ ಕೆಂಪು ಮೆಣಸಿನಕಾಯಿ ,10 ಎಸಳು ಬೆಳ್ಳುಳ್ಳಿ ,ರುಚಿಗೆ ತಕ್ಕಷ್ಟು ಉಪ್ಪು ,ಸ್ವಲ್ಪ ಹಿಂಗು ,ಹರಿಸಿನ ಪುಡಿ ,ಜೀರಿಗೆ ,ಸಾಸುವೆ ,ಕರಿಬೇವು

 

ಮಾಡುವ ವಿಧಾನ : ತೊಗರಿ ಬೇಳೆ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ . ಬಾಣಲೆಯಲ್ಲಿ ಚಮಚ ಎಣ್ಣೆ ಹಾಕಿ ,ಬೆಳ್ಳುಳ್ಳಿ ,ಜೀರಿಗೆ ,ಕರಿಬೇವು ,ಸಾಸುವೆ ಮತ್ತು ಒಣ ಮೆಣಸಿನ ಕಾಯಿ ಹಾಕಿ ಸ್ವಲ್ಪ ಸಮಯ ಉರಿಯಿರಿ . ಅದಕ್ಕೆ ಹಸಿ ಮೆಣಸಿನಕಾಯಿ ,ಹುಣಸೆ ಚಿಗುರು ಹಾಕಿ ಒಂದೆರಡು ನಿಮಿಷ ಫ್ರೈ ಮಾಡಿ . ನಂತರ ಹರಿಶಿನ ಪುಡಿ ,ರುಚಿಗೆ ತಕ್ಕ ಉಪ್ಪು ,ಬೆಲ್ಲದ ತುರಿ ಹಾಕಿ ಮತ್ತು ಬೇಯಿಸಿದ ಬೇಳೆ ಹಾಕಿ ಮಿಶ್ರ ಮಾಡಿ ಮಂದಾಗ್ನಿಯಲ್ಲಿ 5 ನಿಮಿಷ ಬೇಯಿಸಿ ,ದುಂಡಗೆ ಹಚ್ಚಿದ ಈರುಳ್ಳಿಯಿಂದ ಅಲಂಕರಿಸಿ .

 

ಹುಳಿ ಎಂದರೆ ಯಾರಿಗೆ ಇಷ್ಟವಿಲ್ಲ . ಅದರ ಹೆಸರೇ ಬಾಯಲ್ಲಿ ನೀರೂರಿಸುವ ಶಕ್ತಿ . ಅದರಲ್ಲೂ ಮಹಿಳಿಯರಿಗೆ ಹುಳಿ ಮಾವು ,ಹುಣಸೆ ಮುಂತಾದ ಹುಳಿ ಪದಾರ್ಥಗಳನ್ನು ಬಯಸಿ ತಿನ್ನುವರು. ಆಹಾರ,ಔಷಧಿ ಮತ್ತು ರುಚಿಕಾರಕ. ಬೇಸಿಗೆಯಲ್ಲಿ ಹುಣಸೆ ಚಿಗುರು ಶರೀರಕ್ಕೆ ಬಹಳ ತಂಪು . ನೀವು ಕೂಲ್ ಆಗಿರಬೇಕೆ ? ಟ್ರೈ ಮಾಡಿ .

 

 

 

ಗುರುವಾರ, ಏಪ್ರಿಲ್ 4, 2013

yugadiya munnudi

                               ಯುಗಾದಿಯ ಮುನ್ನುಡಿ 


ಯುಗಾದಿ ಹಬ್ಬವನ್ನು  ಕರೆತರಲು ಬೇವು ಹೂ ಬಿಟ್ಟಿದೆ . ಯುಗಾದಿ ಹಬ್ಬದ ದಿನದಂದು ಬೇವು ಬೆಲ್ಲವನ್ನು ಕಷ್ಟ ಸುಖ ಸಂಕೇತವಾಗಿ ಹಂಚಿ ತಿನ್ನುವರು .  ಬೇವಿಗೆ  ಸಂಸ್ಕೃತದಲ್ಲಿ ನಿಂಬ ಎನ್ನುವರು . ಹಿಂದೆ ಜ್ವರ ಬಂದಾಗ  ಬೇವಿನ ಕಷಾಯ ಕುಡಿಸುತ್ತಿದರು .ಯಾವುದೆ ಚರ್ಮ ರೋಗವಿರಲಿ ಅದಕ್ಕೆ  ಬೇವು ಸಿದ್ದೌಷಧಿ . ಕ್ರಿಮಿನಾಶಕ ಗುಣವಿರುವುದರಿಂದ ಕ್ರಿಮಿಘ್ನ ,ಕಾಗೆಗಳಿಗೆ  ಇದರ  ಹಣ್ಣು ಇಷ್ಟ  ಅದ್ದರಿಂದ  ಕಾಕಪ್ರಿಯ ,ಮರವು ಅಂಟಿ ಅಂಶ ಹೊಂದಿರುವುದರಿಂದ ಹಿಂಗುನಿರ್ಯಾಸ ಎಂಬ ಹೆಸರುಗಳಿವೆ .

ಕಹಿ ಔಷಧಿಗಳ ಸಾಲಿನಲ್ಲಿ  ಬೇವು ಪ್ರಮುಖ . ಇದರ ಪ್ರತಿಯೊಂದು ಭಾಗವು ಔಷಧಿ ಗುಣಗಳನ್ನು ಹೊಂದಿದೆ . ಸಾಮಾನ್ಯವಾಗಿ ಬೇವು ಕಫ ಪಿತ್ತ ಶಾಮಕವಾಗಿ
ವಾತವನ್ನು ಹೆಚ್ಚಿಸುವದು . ಕೆಮ್ಮು,ದಮ್ಮು ,ಸಕ್ಕರೆ ಕಾಯಿಲೆ ,ಚರ್ಮರೋಗಗಳು,ಜ್ವರ  ಗಾಯಗಳಿಗೆ  ಉಪಯೋಗವಾಗುವದು . ಯುಗಾದಿ ಹಬ್ಬದಂದು ಬೇವಿನ ಹೂ ಅಥವಾ  ಬೇವಿನ ಚಿಗುರು ಬೆಲ್ಲದ  ಜೊತೆ ಸವಿಯುತ್ತೇವೆ .
ಕೋಮಲ ಚಿಗರು ಬಾಯಿ ಸ್ವಚ್ಛಮಾಡಿ ರುಚಿ ಹೆಚ್ಚಿಸುವದು . ಕ್ರಿಮಿನಾಶಕ ,ಜೀರ್ಣಶಕ್ತಿ ವರ್ಧಕ ,ಚರ್ಮರೋಗ ನಿವಾರಕವಾಗಿದೆ . ಹೂ ಸಹ ಪಿತ್ತನಾಶಕ ,ವಾತವರ್ಧಕ, ವಿಷಘ್ನ ,ಕ್ರಿಮಿಘ್ನ ಗುಣಗಳಿಂದ ಕೂಡಿದೆ . 
ಚರ್ಮರೋಗಗಳಲಿ ಬೇವಿನ ಎಲೆಗಳನ್ನು ಕುಡಿಸಿದ ನೀರಿನಿಂದ ಸ್ನಾನ ಮಾಡುವರು . ಯುಗಾದಿ ಹಬ್ಬದ ದಿನದಂದು ಕಹಿಯ ಸಂಕೇತವಾಗಿ ಉಪಯೋಗಿಸುವ ಬೇವು ಅನೇಕ ರೋಗಗಳಿಗೆ ಮದ್ದಾಗಿ ರೋಗಿಗೆ ಸಂತೋಷ ನೀಡುವುದು . ಅದರಕ್ಕೆ ಕಹಿ ಉದರಕ್ಕೆ ಸಿಹಿಯಾದ ಬೇವು ಶಕ್ತಿ ದೇವಿಯ ಪೂಜೆಗೆ ಶ್ರೇಷ್ಠ .