hasiru nadige
ಸೋಮವಾರ, ಏಪ್ರಿಲ್ 29, 2013
ಮನೆ
ಸೂರ್ಯನ ಸಿಟ್ಟು ಹೀರಿ
ತನ್ನೊಡೆಯನ ತಂಪಾಗಿಸುವ
ಕರಿ ಹೆಂಚಿನ ಮನೆ
ಬೇಸಿಗೆಯ ನೆಮ್ಮದಿ ಮನೆ
ಮನೆ ಹಲವು
ಹುಲ್ಲಿನ,ಹಾಪಿನ
ತೆಂಗಿನ ಗರಿಯ
ಅಡಿಕೆ ದಬ್ಬೆಯ
ಲಕ್ಕಿಯ,ಬಿದುರಿನ
ಮಣ್ಣಿನ,ಕಲ್ಲಿನ
ಕರಿ,ಕೆಂಪು ಹೆಂಚಿನ
ಕಬ್ಬಿಣ,ಸಿಮೆಂಟಿನ
RCC ಯ ಅರಮನೆ !
ಭೂತಾಯ ಮಡಿಲಲಿ
ಆಗಸವ ಹೊದ್ದು
ಮಲಗಿದವನ ಮನೆ
ಆನಂದದ ಮನೆ
ಎಲ್ಲರಿರುವುದು
ಬಾಡಿಗೆ ಮನೆ
ಲಕ್ಷ ,ಕೋಟಿ ಹಾಕಿ
ಬಡಿದಾಡಿ ಕಟ್ಟುವರು
ಬಹುಮಹಡಿ ಭ್ರಾಂತಿ ಮನೆ
ಅದು ನಮ್ಮನೆ
ಇದು ನಿಮ್ಮನೆ
ಅಲ್ಲಿರುವನು ಸುಮ್ಮನೆ !
ಡಾ . ನಾಗೇoದ್ರ ಮಲ್ಲಾಡಿಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ