ಉರಿ ಬಿಸಿಲು
-ಹುಣಸೆ ಚಿಗುರು
ಭೂಮಿಯೇ
ಬಾಯಿ
ಬಿಟ್ಟು
ನೀರು
ಎನ್ನುವಂತ ಬಿರು
ಬಿಸಿಲು
! ಮಳೆ
ಮುಗಿಲು
ಸೇರಿದೆ
. ಬಿಸಿಲ
ಧಗೆಗೆ
ನೀರು
ಕುಡಿ
ಕುಡಿದು
ಸಾಕಾಗಿದೆ . ಊಟ
ರುಚಿಸುವುದಿಲ್ಲ . ಪ್ರಕೃತಿಯ ಪಾಕ
ಶಾಲೆಯಲ್ಲಿ ಕಾಲಕ್ಕೆ ತಕ್ಕಂತೆ ಆಹಾರ
ತಯಾರಿಸುತ್ತದೆ. ಸೂಕ್ಷ್ಮ ಬುದ್ದಿಯಿಂದ ಅರಿತು
ಅದರಂತೆ
ನಡೆದರೆ
ಆಹಾರವು
ರುಚಿಸುವುದು ,ಆರೋಗ್ಯವು ಸುಧಾರಿಸುವುದು . ಉರಿ
ಬಿಸಿಲಿನಲ್ಲಿ ಹುಣಸೆ
ಮರ
ಚಿಗುರಿದೆ . ಹಸಿರು
,ತಾಮ್ರ
ವರ್ಣದ
ಕೋಮಲ
ಚಿಗುರು
ಬೇಸಿಗೆಯ ಸ್ವಾದಿಷ್ಟ ಅಡುಗೆಯ
ಒಂದು
ಭಾಗವಾಗಿದೆ . ಕೆಲವರಿಗೆ ಗೊತ್ತಿರಲಿಕ್ಕಿಲ್ಲ , ಆದರೆ
ತಮಿಳುನಾಡು ,ಆಂಧ್ರ
ಪ್ರದೇಶಗಳಲ್ಲಿ ಹುಣಸೆ
ಚಿಗುರಿನ ಸಾರು,ರಸಮ್ ,ಪುಳಿಯೊಗರೆ ,ಚಿತ್ರಾನ್ನ ಮಾಮೂಲಿ.
ಸಂಸ್ಕೃತದಲಿ ಚಿಂಚ
,ಹಿಂದಿಯಲಿ ಹಿಮ್ಲಿ
,ತೆಲುಗಿನಲ್ಲಿ ಚಿಂತಪಂಡು ,ಇಂಗ್ಲೀಷ್ನಲಿ tamarind tree ಎಂದು ಕರೆಯುವ
ಹುಣಸೆ
ಮರದ
ವೈಜ್ಞಾನಿಕ ಹೆಸರು
Tamarindus indica .fabeceae ಸಸ್ಯ ವರ್ಗಕ್ಕೆ ಸೇರಿದೆ
. ಹುಣಸೆ
ಮರದ
ಎಲ್ಲಾ
ಭಾಗಗಳು
ಔಷಧಿ
ಗುಣ
ಹೊಂದಿವೆ .
ಚಿಗುರು,ಮೊಗ್ಗು ಮತ್ತು
ಹೂ
ಸೊಪ್ಪಿನ ಸಾರಿನಂತೆ ಉಪಯೋಗಿಸಬಹುದು . ಹುಣಸೆಯ
ಹುಳಿ
ರಸವು
ಬಾಯಿಯನ್ನು ಸ್ವಚ್ಚಗೊಳಿಸುವದು . ಆಹಾರವನ್ನು ರುಚಿಸುವಂತೆ ಮಾಡುವುದು . ಹಸಿವು,ಜೀರ್ಣ ಶಕ್ತಿಯನ್ನು ಹೆಚ್ಚಿಸುವುದು .ಬೇಸಿಗೆ
ದಿನಗಳಲಿ ಸಿಗುವ
ಚಿಗುರು
ಶರೀರಕ್ಕೆ ತಂಪು
ನೀಡುವುದು. ಅದ್ದರಿಂದ ಅನುಭವಿಗಳು ಚಿಗುರಿನ ಸಾರನ್ನು ಇಷ್ಟಪಟ್ಟು ತಿನ್ನುವರು .ಔಷಧಿ
ರೂಪದಲಿ
ಬಳಕೆಯಾಗುವ ಚಿಗುರು
ಸುಟ್ಟ
ಗಯಾಗಳಿಗೆ ಉತ್ತಮ ಔಷಧಿಯಾಗಿದೆ .
ನೀವು ಪ್ರಯತ್ನ ಮಾಡಿ :
ಹುಳಿ ಸೊಪ್ಪು :
ಬೇಕಾಗುವ ಸಾಮಗ್ರಿಗಳು
ಪಾಲಕ್ ಸೊಪ್ಪು ,ಮೆಂತೆ ಸೊಪ್ಪು , ಹುಣಸೆ ಚಿಗುರು ,ತೊಗರಿಬೇಳೆ ,ಈರುಳ್ಳಿ 2 ,ಟಮೆಟೋ 2 ,ಮೆಣಸಿನಕಾಯಿ 6 , ಬದನೆ ಕಾಯಿ 1 ,ಬೆಳ್ಳುಳ್ಳಿ ಮಧ್ಯಮ ಗಾತ್ರದ್ದು 1 ,ಹುಣಸೆ ಹಣ್ಣು, ಸಾಂಬರ್ ಪುಡಿ,ಕಾಯಿ ತುರಿ
ಮಾಡುವ ವಿಧಾನ :
ಎಲ್ಲಾ ಸೊಪ್ಪುಗಳನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ . ಕುಕ್ಕರ್ ನಲ್ಲಿ ಹಚ್ಚಿಕೊಂಡ ಈರುಳ್ಳಿ ,
ಟಮೆಟೊ , ಮೆಣಸಿನಕಾಯಿ,ಬದೆನೆಕಾಯಿ ,ಹುಣಸೆಹಣ್ಣು ,ಸಾಂಬರ್ ಪುಡಿ ,ಉಪ್ಪು ,ಕಾಯಿತುರಿ ಮತ್ತು ಸೊಪ್ಪು ಒಂದು ಲೀಟರ ನೀರು ಹಾಕಿ 3 ವಿಶಿಲ್ ಕೂಗಿದ ನಂತರ ಕೆಳಗಿಳಿಸಿ ಮತ್ತೆ ಮಿಶ್ರಣವನ್ನು ಮಸೆದುಕೊಂಡು ಒಗ್ಗರಣೆ ಕೊಟ್ಟರೆ ಹುಳಿ ಸೊಪ್ಪು ರೆಡಿ .
ಚಿಗುರು ಬೇಳೆ : ಬೇಕಾಗುವ ಸಾಮಗ್ರಿಗಳು
ಒಂದು ಕಪ್ ಎಳೆ
ಹುಣಸೆ ಚಿಗುರು, ಎರಡು ಕಪ್
ತೊಗರಿ ಬೇಳೆ
3 ಹಸಿಮೆಣಸಿನ ಕಾಯಿ ,2 ಚಮಚ ಬೆಲ್ಲದ
ತುರಿ ,2 ಚಮಚ ಎಣ್ಣೆ ,2 ಒಣಗಿದ
ಕೆಂಪು ಮೆಣಸಿನಕಾಯಿ ,10 ಎಸಳು ಬೆಳ್ಳುಳ್ಳಿ ,ರುಚಿಗೆ
ತಕ್ಕಷ್ಟು ಉಪ್ಪು ,ಸ್ವಲ್ಪ ಹಿಂಗು
,ಹರಿಸಿನ ಪುಡಿ ,ಜೀರಿಗೆ ,ಸಾಸುವೆ
,ಕರಿಬೇವು
ಮಾಡುವ ವಿಧಾನ : ತೊಗರಿ
ಬೇಳೆ
ಕುಕ್ಕರ್ ನಲ್ಲಿ
ಬೇಯಿಸಿಕೊಳ್ಳಿ . ಬಾಣಲೆಯಲ್ಲಿ ೨
ಚಮಚ
ಎಣ್ಣೆ
ಹಾಕಿ
,ಬೆಳ್ಳುಳ್ಳಿ ,ಜೀರಿಗೆ
,ಕರಿಬೇವು ,ಸಾಸುವೆ
ಮತ್ತು
ಒಣ
ಮೆಣಸಿನ
ಕಾಯಿ
ಹಾಕಿ
ಸ್ವಲ್ಪ
ಸಮಯ
ಉರಿಯಿರಿ . ಅದಕ್ಕೆ
ಹಸಿ
ಮೆಣಸಿನಕಾಯಿ ,ಹುಣಸೆ
ಚಿಗುರು
ಹಾಕಿ
ಒಂದೆರಡು ನಿಮಿಷ
ಫ್ರೈ
ಮಾಡಿ
. ನಂತರ
ಹರಿಶಿನ
ಪುಡಿ
,ರುಚಿಗೆ
ತಕ್ಕ
ಉಪ್ಪು
,ಬೆಲ್ಲದ
ತುರಿ
ಹಾಕಿ
ಮತ್ತು
ಬೇಯಿಸಿದ ಬೇಳೆ
ಹಾಕಿ
ಮಿಶ್ರ
ಮಾಡಿ
ಮಂದಾಗ್ನಿಯಲ್ಲಿ 5 ನಿಮಿಷ
ಬೇಯಿಸಿ
,ದುಂಡಗೆ
ಹಚ್ಚಿದ
ಈರುಳ್ಳಿಯಿಂದ ಅಲಂಕರಿಸಿ .
ಹುಳಿ ಎಂದರೆ ಯಾರಿಗೆ ಇಷ್ಟವಿಲ್ಲ . ಅದರ ಹೆಸರೇ ಬಾಯಲ್ಲಿ ನೀರೂರಿಸುವ ಶಕ್ತಿ . ಅದರಲ್ಲೂ ಮಹಿಳಿಯರಿಗೆ ಹುಳಿ ಮಾವು ,ಹುಣಸೆ ಮುಂತಾದ ಹುಳಿ ಪದಾರ್ಥಗಳನ್ನು ಬಯಸಿ ತಿನ್ನುವರು. ಆಹಾರ,ಔಷಧಿ ಮತ್ತು ರುಚಿಕಾರಕ. ಬೇಸಿಗೆಯಲ್ಲಿ ಹುಣಸೆ ಚಿಗುರು ಶರೀರಕ್ಕೆ ಬಹಳ ತಂಪು . ನೀವು ಕೂಲ್ ಆಗಿರಬೇಕೆ ? ಟ್ರೈ ಮಾಡಿ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ