ನೀವು ದಪ್ಪವಾಗಬೇಕೇ?
ಸಣಕಲು ಸುಮಳ ಮದುವೆ ಫಿಕ್ಸ್ ಆಯ್ತು . ಮೈ,ಕೈ ತುಂಬಿಕೊಂಡು ಸುಂದರವಾಗಿ ಕಾಣುವಾಸೆ ಚಿಗುರೊಡೆಯಿತು . ಕುಳಿ ಬಿದ್ದ ಕೆನ್ನೆಗಳಿಗೆ ಕೊಬ್ಬು ತುಂಬಿಕೊಳ್ಳುವ ತವಕ ಹೆಚ್ಚಾಯ್ತು . ಹೀಗೆ ಕೆಲವು ಸಂದರ್ಭಗಳು ,ಹಲವರ ಟೀಕೆಗಳು ಸಣ್ಣಗಿದ್ದವರನ್ನು ದಪ್ಪಗಾಗಲು ಪ್ರೇರೆಪಿಸುತ್ತವೆ .
ನೀವು ತೆಳ್ಳಗಿದ್ದೀರಾ ? ಸದೃಢ ಮೈಕಟ್ಟನ್ನು ಹೊಂದಿ ,ದೇಹದ ತೂಕ ಹೆಚ್ಚಿಸಿಕೊಳ್ಳಬೇಕೆ? ದಪ್ಪಗಾಗಲು ಗ್ಯಾರಂಟಿ ಔಷಧಿ ಕೊಡುತೇವೆ . ಎನ್ನುವ ವಿವಿಧ ಮಾಧ್ಯಮಗಳ ಜಾಹೀರಾತುಗಳು ತೆಳ್ಳಗಿದವರನ್ನ ತಬ್ಬಿಕೊಳ್ಳಲು
ತುದಿಗಾಲಲ್ಲಿವೆ. ಜನರು ಸಹ ಅಕ್ಕಿ,ರಾಗಿಯಂತೆ ಔಷಧಿ ಕೊಳ್ಳಲು ಪ್ರಾರಂಭಿಸಿದ್ದಾರೆ. ತೆಳ್ಳಗಾಗಲು ,ಬೆಳ್ಳಗಾಗಲು ,ದಪ್ಪಗಾಗಲು
ಬೋಳುತಲೆ ಚಿಗುರೊಡೆಯಲು ,ಬುದ್ದಿವಂತರಾಗಲು ತಾವೇ ಔಷಧಿ ಖರೀದಿಸುವುದು ಸಮಂಜಸವಲ್ಲ .
ಸಣ್ಣಗಿದ್ದವರು ದಪ್ಪ ,ದಪ್ಪಗಿದ್ದವರು ಸಣ್ಣಗಾಗುವ ಟ್ರೆಂಡ್ ಹೊಸದೇನೂ ಅಲ್ಲ. ಸಾವಿರಾರು ವರ್ಷಗಳ ಹಿಂದೆಯೇ ದೇಹದ
ಆಕೃತಿಯ ಆಧಾರದ ಮೇಲೆ ಎರಡು ವಿಧ ಚಿಕಿತ್ಸೆಗಳನ್ನು ತಿಳಿಸಿದ್ದಾರೆ. ಆಯುರ್ವೇದದ 'ಅಷ್ಟಾಂಗ ಹೃದಯದಲ್ಲಿ' ತೆಳ್ಳಗಿದ್ದವರನ್ನು
ದಪ್ಪ ಮಾಡುವ ಬೃಂಹಣ (ಸಂತರ್ಪಣ ) ಮತ್ತು ದಪ್ಪಗಿದ್ದವರನ್ನು ತೆಳ್ಳಗೆ ಮಾಡುವ ಲಂಘನ (ಅಪತರ್ಪಣ )ವಿಧಾನಗಳನ್ನು
ವಿವರಿಸಿದ್ದಾರೆ .
ಬೃಂಹಣ ಚಿಕಿತ್ಸೆ
ತೆಳ್ಳಗಿದವರನ್ನು ದಪ್ಪಮಾಡುವುದೇ ಬೃಂಹಣವಾಗಿದೆ . ಶಾಸ್ತ್ರದಲ್ಲಿ ಮನೋದೈಹಿಕ ತಳಹದಿಯ ಮೇಲೆ ರೂಪಿಸಿರುವ ಈ ಚಿಕಿತ್ಸೆ ಆಹಾರ, ಔಷಧಿಗಳ ಮಿಶ್ರಣವಾಗಿದೆ.
ಯಾರಿಗೆ ಬೇಕು ಬೃಂಹಣ
- ಅತಿಮದ್ಯಸೇವನೆ ,ಅತಿಯಾದ ಲೈಂಗಿಕ ಕ್ರಿಯೆ ,ಭಾರವಾದ ವಸ್ತುಗಳನ್ನು ಹೊರುವವರು (ಕೊಲಿ ಕೆಲಸ ಮಾಡುವವರು ),ಕಷ್ಟಪಡುವವರು ,ಅತಿ ದೂರ ಪ್ರಯಾಣ ಮಾಡುವವರು ,ದುರ್ಬಲರು ,ವಾತದೋಷದಿಂದ ಬಳಲುತಿರುವವರು ಬೃಂಹಣ ಚಿಕಿತ್ಸೆ ತೆಗೆದುಕೊಳ್ಳಬೇಕು.
- ಆರೋಗ್ಯವಂತರು ಸಹ ಆರೋಗ್ಯ ಕಾಪಾಡಿಕೊಳ್ಳಲು ಬೃಂಹಣ ಉತ್ತಮವಾಗಿದೆ.
- ಮಕ್ಕಳು ,ವಯಸ್ಸಾದವರು ,ಗರ್ಭಿಣಿ ಮತ್ತು ಸೂತಿಕ ಅವಸ್ಥೆಗಳಲ್ಲಿ ಉಪಯೋಗಿಸಲೇ ಬೇಕು.
- ಚಿಂತೆ ಮಾಡುವವರು
- ಗ್ರೀಷ್ಮ ಋತುವಿನಲ್ಲಿ ಈ ಎಲ್ಲಾ ಸಂದರ್ಭಗಳಲ್ಲಿ ಶಕ್ತಿ ವರ್ಧನೆಗಾಗಿ ,ಮನೋದೈಹಿಕ ಕ್ಷಮತೆಯನ್ನು ಹೆಚ್ಚಿಸಲು ಬೃಂಹಣ ಚಿಕಿತ್ಸೆ ಸಹಕಾರಿಯಾಗಿದೆ.
ಬೃಂಹಣೀಯ ಆಹಾರ
ಸಿಹಿ ಮತ್ತು ಜಿಡ್ಡಿನಿಂದ ಕೂಡಿದ ಯಾವುದೇ ಪದಾರ್ಥ ಬೃಂಹಣವಾಗಿದೆ. ಉದಾ:ಮಾಂಸ ,ಹಾಲು,ತುಪ್ಪ ಮುಂತಾದ ಸಿಹಿ ಮತ್ತು ಜಿಡ್ಡಿನ ಆಹಾರ. ಮಾಂಸವು ಉತ್ತಮ ಬೃಂಹಣೀಯ. ಮಾಂಸಕ್ಕೆ ಸಮಾನವಾದ ಬೃಂಹಣ ಆಹಾರ ಮತ್ತೊಂದಿಲ್ಲ. ಅದಕ್ಕೆ ಗ್ರಂಥಗಲ್ಲಿ "ನಹಿ ಮಾಂಸ ಸಮo " ಎಂದಿದ್ದಾರೆ . ಇಂದು ನಾವು ಸೇವಿಸುತ್ತಿರುವ ಆಹಾರ ಕಳಪೆ ಮತ್ತು ಕಲಬೆರಕೆ.
ಶುದ್ದವಾದ , ಸ್ವಾಭಾವಿಕವಾದ ,ಉತ್ತಮ ಗುಣಮಟ್ಟದ ಆಹಾರ ಸೇವಿಸಬೇಕು.
ಮನೋ ಬೃಂಹಣ: ನೀವು ದಪ್ಪವಾಗಬೇಕೆ ? ಮೊದಲು ನೆಮ್ಮದಿಯಿಂದಿರಿ .
ಅಚಿಂತೆ : ಚಿಂತೆ ಹಲವು ರೋಗಗಳಿಗೆ ಮೂಲ. "ಚಿಂತೆ ಇಲ್ಲದವನಿಗೆ ಸಂತೆಗೆ ನಿದ್ದೆ ಬಂತಂತೆ" ಚಿಂತೆಯು ಮಾಡುವದರಿಂದ ಸಣ್ಣಗಾಗುತ್ತಾರೆ. ಆದುದರಿಂದ ಚಿಂತೆ ಮಾಡದಿರುವುದು ಒಳ್ಳೆಯದು.
ಹರ್ಷಣ : ಹರ್ಷಣವೆಂದರೆ ಸಂತೋಷ. ಸಂತೋಷವೆ ಆರೋಗ್ಯ. ದುಃಖವೆ ರೋಗ . ಸದಾ ಸಂತೋಷದಿಂದದಿರಬೇಕು.
ನಿವೃತಿ :ತೃಪ್ತಿಯೇ ನಿವೃತಿ . ಇದ್ದುದರಲ್ಲೇ ತೃಪ್ತಿಕರ ಜೀವನ ನಡೆಸಬೇಕು.
ಸಪ್ನ : ನಿದ್ರೆ ಮನುಷ್ಯನಿಗೆ ಚೈತನ್ಯ ಮತ್ತು ಆರೋಗ್ಯ ನೀಡುವುದು. ಸುಖ ನಿದ್ರೆ ಮನುಷ್ಯನನ್ನು ದಪ್ಪ ಮಾಡುವದು.
ಅಭ್ಯಂಗ : ಎಣ್ಣೆಯನ್ನು ನಿಯಮನುಸಾರವಾಗಿ ಮೈಗೆ ತಿಕ್ಕುವುದಕ್ಕೆ ಅಭ್ಯಂಗ ಏನ್ನುವರು . ಈ ಕ್ರಿಯೆ ವಾತದೋಷವನ್ನು ಕಡಿಮೆ ಮಾಡುವದಲ್ಲದೆ ಶರೀರಕ್ಕೆ ಬಲ ನೀಡುವದು.
ಅಭ್ಯಂಗ : ಎಣ್ಣೆಯನ್ನು ನಿಯಮನುಸಾರವಾಗಿ ಮೈಗೆ ತಿಕ್ಕುವುದಕ್ಕೆ ಅಭ್ಯಂಗ ಏನ್ನುವರು . ಈ ಕ್ರಿಯೆ ವಾತದೋಷವನ್ನು ಕಡಿಮೆ ಮಾಡುವದಲ್ಲದೆ ಶರೀರಕ್ಕೆ ಬಲ ನೀಡುವದು.
ಸ್ನಾನ :ಸ್ನಾನ ಮಾಡುವದರಿಂದ ಹಸಿವು ಹೆಚ್ಹುವದು. ಶರೀರದ ಮಲ ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ನೀಡುವದು.
ಸಣ್ಣಗಿರುವವರನ್ನು ದಪ್ಪ ಮಾಡಲು ಕೇವಲ ಒಂದು ಔಷಧಿ ಸಾಕೆ? ಸ್ವಯಂ ವೈದ್ಯರಾಗಬೇಡಿ ಜೋಕೆ. ದಪ್ಪ ಮಾಡುವ ಚಿಕಿತ್ಸೆ
ವ್ಯಕ್ತಿಗಿಂತ ವ್ಯಕ್ತಿಗೆ ಭಿನ್ನವಾಗಿದೆ. ರೋಗಿಯ ಮನೋದೈಹಿಕ ಸ್ಥಿತಿಯನ್ನು ಅರಿತು, ಉತ್ತಮ ಆಹಾರ ,ವಿಹಾರ ಮತ್ತು ಔಷಧಿಗಳನ್ನು ಪ್ರಯೋಗಿಸಿದರೆ ಸಣಕಲು, ಬಡಕಲು ದೇಹದವರು ದಪ್ಪವಾಗಿ ಸುಂದರವಾಗಿ ಕಾಣಬಹುದು.
ಡಾ. ಎಂ. ನಾಗೇoದ್ರ ಮಲ್ಲಾಡಿಹಳ್ಳಿ
ಸಣ್ಣಗಿರುವವರನ್ನು ದಪ್ಪ ಮಾಡಲು ಕೇವಲ ಒಂದು ಔಷಧಿ ಸಾಕೆ? ಸ್ವಯಂ ವೈದ್ಯರಾಗಬೇಡಿ ಜೋಕೆ. ದಪ್ಪ ಮಾಡುವ ಚಿಕಿತ್ಸೆ
ವ್ಯಕ್ತಿಗಿಂತ ವ್ಯಕ್ತಿಗೆ ಭಿನ್ನವಾಗಿದೆ. ರೋಗಿಯ ಮನೋದೈಹಿಕ ಸ್ಥಿತಿಯನ್ನು ಅರಿತು, ಉತ್ತಮ ಆಹಾರ ,ವಿಹಾರ ಮತ್ತು ಔಷಧಿಗಳನ್ನು ಪ್ರಯೋಗಿಸಿದರೆ ಸಣಕಲು, ಬಡಕಲು ದೇಹದವರು ದಪ್ಪವಾಗಿ ಸುಂದರವಾಗಿ ಕಾಣಬಹುದು.
ಡಾ. ಎಂ. ನಾಗೇoದ್ರ ಮಲ್ಲಾಡಿಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ