ಗುರುವಾರ, ಮೇ 2, 2013

ಮಲ್ಲಿಗೆ 


ಯಾರು ನೆಟ್ಟರೋ ,ಬಿಟ್ಟರೋ
ಹುಲುಸಾಗಿ ಬೆಳೆದಿದೆ
ಬಲಿತು
ಬಾಹುಗಳ ಚಾಚಿ
 ಆಲಿವಾಣದ ಮರ ತಬ್ಬಿ
ಎಲ್ಲರ ಕಣ್ಣು ಕುಕ್ಕುತಿದೆ
ಮಲ್ಲಿಗೆಯ ಬಳ್ಳಿ
ನೋಡಬೆಕೀಗ ಎಲ್ಲರ ಕಳಕಳಿ

ಹೂ ಮಾರುವಬಿಲಗಳಲಿ ವಳ
ಪುಟ್ಟಿಯಲ್ಲಿ
ನನ್ನವಳ ತುರುಬಿನಲ್ಲಿ
ದೇವರ ನೆತ್ತಿಯಲ್ಲಿ
ಪೂಜಾರಿಯ ಪ್ರಸಾದದಲ್ಲಿ 
ಮಧು ಚಂದ್ರದ ಮಂಚದಲ್ಲಿ
ಬಿಳಿ ತೊಗಲಿನ ಕೊರಳಲ್ಲಿ
ತೂಗುವ ತೊಟ್ಟಿಲಲ್ಲಿ
ಸನ್ಮಾನದ ಸಂತೆಯಲ್ಲಿ
ಪಂಚಭೂತಗಳ ಪಯಣದಲ್ಲಿ
ಮೂಗು ,ಮನಸಿನ ಮನೆಯಲ್ಲಿ
ಭಾವನೆಗಳ  ಬಿಲಗಳಲಿ
ಕಣ್ ಬಿಡುತ್ತೆ  ಪಿಳಿಪಿಳಿ

ದುಂಡು ಸೂಜಿ ಜಾಜಿ
ಮೈಸೂರು ಮಂಗಳೂರು
ಶಂಕರಪುರದ
ನನ್ನೂರ ನಿನ್ನೂರ
ಘಮ ಘಮ ಮಲ್ಲಿಗೆ
ಯಾರು ನೆಟ್ಟರೇನು ,ಬಿಟ್ಟರೇನು
ಕಾಲತೆಕ್ಕೆಯಲಿ ಮೈ ಮರೆಯುವಳು
ಮೆಲ್ಲಗೆ !

ಡಾ. ನಾಗೇoದ್ರ ಮಲ್ಲಾಡಿಹಳ್ಳಿ





 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ