ಶುಕ್ರವಾರ, ಮೇ 3, 2013

ನಾ ಕಾಣೆ

 ಓಟಿಗಾಗಿ .....  
ಹಲವು ಆಣೆ ಪ್ರಮಾಣ
ಲಿಂಗ ಶಿವದಾರ ಜನಿವಾರದಾಣೆ
ತಿಮ್ಮಪ್ಪನ ಮೇಲೆ ಆಣೆ
ಅಪ್ಪ ಅಮ್ಮನಾಣೆ
ಮಕ್ಕಳು ಮೊಮ್ಮಕ್ಕಳಾಣೆ
ಹಾಲು ,ನೀರು
ನಾಗವಲ್ಲಿ ಮೇಲಾಣೆ

ಕುಡಿಕುಡಿದು
ಮತಗಟ್ಟೆ ಮರೆತು
ಆಣೆ ನಿಶೆಯಲಿ ಬೆರೆತು
ಒತ್ತಾಯ ಮಾಡಿದರೆ
ಯಾವ ಗುರುತಿಗೆ
ಯಾರಿಗೆ ಒತ್ತುತ್ತಾನೋ ?
ನಾ ಕಾಣೆ
ದೇವರ ಮೇಲಾಣೆ

ಡಾ .ನಾಗೇoದ್ರ ಮಲ್ಲಾಡಿಹಳ್ಳಿ












  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ