ಕವನ ಬರಿಯಯ್ಯ
ಕಿಸಿದವಳ ನಗು ನೋಡಿಹಸಿದವಳ ಹೊಟ್ಟೆ ನೋಡಿ
ಕಾಡುವ ಭಿಕ್ಷುಕನಿಗೆ ನೀಡಿ
ಪ್ರಕೃತಿ ಮಾತೆಯ ಬೇಡಿ
ಕವನ ಬರಿಯಯ್ಯ
ಬರೆಯುತಾ ಕೂತರೆ
ತಾನೆ ಎದ್ದು ಓಡುವುದಯ್ಯ
ಮುತ್ತಿಕ್ಕಲು ದುಂಬಿ ಓಡಿ
ಮೆತ್ತಗಾಯ್ತು ಕನಸ ಮೋಡಿ
ಕಲ್ಪೆನೆಯ ಜೋತೆಯಾಡಿ
ಮನಸಿನಲ್ಲಿದುದ್ದನ್ನ ಮೆತ್ತಗೆ ಮಾಡಿ
ಕವನ ಬರಿಯಯ್ಯ
ಬರೆಯುತಾ ಕೂತರೆ
ತಾನೆ ಎದ್ದು ಓಡುವುದಯ್ಯ
ಹಸಿ ಅನುಭವಗಳ ಬಿಸಿ ಮಾಡಿ
ಆಸೆಯ ಆಗಸದಲಿ ತೇಲಾಡಿ
ಜೀವನ ಬಸ್ಸಿನಲ್ಲಿ ನೂಕಾಡಿ
ಆಡುವ ಮಕ್ಕಳ ಜೊತೆಗೂಡಿ
ಕವನ ಬರಿಯಯ್ಯ
ಬರೆಯುತಾ ಕೂತರೆ
ತಾನೆ ಎದ್ದು ಓಡುವುದಯ್ಯ !!!
ಅಯ್ಯ, ಸ್ನಿಗ್ದ ಪ್ರೀತಿಯಲಿ
ಮುಳುಗಿ
ಮುoದೆ ....... ಅದೇ
ಧ್ಯಾನದ ಹಾದಿ ಕಣಯ್ಯಾ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ