ತೊಟ್ಟಿಲ ಮದ್ದು
ಭತ್ತದ ಅರಳು ಅಥವಾ ಹುಳ್ಳಿ ಕಾಳು ಹುರಿದಂಗೆ ಪಟ ಪಟನೆ ಮಾತನಾಡುವ ಚುರುಕಾದ ಮಕ್ಕಳನ್ನು ಕಂಡಾಗ "ನಿನ್ನ ಬಾಯಿಗೆ ಬಜೆ ಹಾಕ್ದೊರ್ ಯಾರು ಮಾರಾಯ ?"ಎನ್ನುತೇವೆ .
ಮಾತಿಗೂ ಬಜೆಗೂ ನಿಕಟ ಸಂಬಂಧವಿದೆ. ಸಂಸ್ಕೃತದಲ್ಲಿ ಬಜೆಗೆ ವಚ ಎನ್ನುವರು.
ವಚನ(ಮಾತಿನ) ಶಕ್ತಿಯನ್ನು ಹೆಚ್ಚಿಸುವ ಗುಣವಿರುವುದರಿಂದ ಬಜೆಗೆ ವಚ ಎನ್ನುತಾರೆ. ಮಗುವಿನ ನಾಮಕರಣ ಸಂದರ್ಭದಲ್ಲಿ ಬಜೆ ಮತ್ತು ಬಂಗಾರವನ್ನು ತೇದು ಮಗುವಿಗೆ ಸೋದರಮಾವ ನೆಕ್ಕಿಸುವ ಸಂಪ್ರದಾಯವಿದೆ. ಸ್ವರಕ್ಕೆ ಹಿತವಾಗಿ ಮತ್ತು ಮಾತಿನ ಶಕ್ತಿಯನ್ನು ವರ್ಧಿಸುವದರಿಂದ "ವಾಕ್ ಸ್ವರಪ್ರದ" ವಾಗಿದೆ. ಪುರಾತನ ವೈದ್ಯಶಾಸ್ತ್ರ ಬಜೆಯ ಸ್ವರೂಪ ಮತ್ತು ಕಾರ್ಯವನ್ನು ವರ್ಣಿಸಿದೆ. ಕಂದವು ಅರುಣ ಬಣ್ಣವಿರುವುದರಿಂದ ಅರುಣ ,ಸೂಕ್ಷ್ಮ ಬೇರುಗಳನ್ನು ಹೊಂದಿರುವುದರಿಂದ ಗೋಲೊಮಿ ,ಲೊಮಶಿ , ಕಂದವು ಗಣ್ಣುಗಳಿಂದ ಕೂಡಿರುವದರಿಂದ ಶತಪರ್ವಕ ,ದೇಹದ ಕೊಬ್ಬನ್ನು ಕರಗಿಸುವದರಿಂದ ಕರ್ಷಿಣಿ , ದುಷ್ಟ ಗ್ರಹಗಳನ್ನು ದೊರಮಾಡುವುದರಿಂದ ಭೂತನಾಶಿನಿ , ರೋಗಗಳನ್ನು ಗೆಲ್ಲುವುದರಿಂದ ವಿಜಯ ಮತ್ತು ಶುಭಕರವಾಗಿರುವುದರಿಂದ ಮಾಂಗಲ್ಯ ಎಂದು ಪ್ರಚಲಿತ.
tottila maddu beda swaamigale chochhala maddu anta change madrie
ಪ್ರತ್ಯುತ್ತರಅಳಿಸಿ