ಮನಸು ಮಲಗಿತು
ಆಹಾ.... ಕುಂದಾಪುರ
ಅಲ್ಲಿಗೆ ಹೋಗಬೇಕು ಸರ ಸರ
...
ಆಗುಂಬೆಯ ಸಂಜೆ ಸೂರ್ಯನ
ಕಣ್ಣಲ್ಲಿ ಕಟ್ಟಿಕೊಂಡು
ಹಾವಿನಂತೆ ಸುತ್ತಿಕೊಂಡು
ಕನಸ ಕ್ಯಾಮರ ಹೊತ್ತುಕೊಂಡು
ಸಾಗು... ಭಾವನೆಗಳ ಮೆತ್ತಿಕೊಂಡು
ಅವಸರಕ್ಕೆ ತುಂಡರಿಸಿದ ಕನ್ನಡ
ಹಲಸಿನ ಕೊಟ್ಟೆ ಕಡುಬು
ನೀರು ದೋಸೆ ಆಸೆ
ಮುಗಿಲು ಕಳಚಿ ಬೀಳುವ ಮಳೆ
ಬೆಳೆಯಬಹುದು ಬೆವರಿನಲ್ಲಿ ಬೆಳೆ
ಆನೆಗುಡ್ಡೆ ಗಣಪ
ಬಾರ್ಕೂರು ದೇವಿ
ಕೋಟೇಶ್ವರ ಕೋಟಿಲಿಂಗ
ಕುಂಭಾಸಿಯ ಹರಿಹರ
ಸಾಲಿಗ್ರಾಮದ ನರಸಿಂಹನ
ನಮಸ್ಕರಿಸಿ ಮುನ್ನೆಡೆ
ಕಡಲ ತಟದಲಿ
ರವೆಯಂತ ಮರಳು
ಮರಳ ಮನೆಯಲಿ
ಮಕ್ಕಳ ಸಂತೆ
ಅವರಿಗಿಲ್ಲ ನಾಳೆಯ ಚಿಂತೆ
ಅಲ್ಲಿ ಹರಿದಾಡುವ ಪ್ರೇಮಿಗಳು
ಮೀನು ಹಿಡಿಯುವ ಬೆಸ್ತರು
ಗೂಡು ಸೇರಲು ಓಡುವ ಏಡಿಗಳು
ಕೇಕೆ ಹಾಕುವ ನವಿಲುಗಳು
ಕಷ್ಟ ಸುಖಗಳ
ಶರಧಿಯ ಏರಿಳಿತಗಳು
ಮಿಂದ ಮನ
ದಡವನ್ನೆ ಸುತ್ತಿಕೊಂಡು
ಮುದ್ದಾಗಿ ಮಲಗಿತು
ಆಹಾ.... ಕುಂದಾಪುರ
ಅಲ್ಲಿಗೆ ಹೋಗಬೇಕು ಸರ ಸರ
...
ಆಗುಂಬೆಯ ಸಂಜೆ ಸೂರ್ಯನ
ಕಣ್ಣಲ್ಲಿ ಕಟ್ಟಿಕೊಂಡು
ಹಾವಿನಂತೆ ಸುತ್ತಿಕೊಂಡು
ಕನಸ ಕ್ಯಾಮರ ಹೊತ್ತುಕೊಂಡು
ಸಾಗು... ಭಾವನೆಗಳ ಮೆತ್ತಿಕೊಂಡು
ಅವಸರಕ್ಕೆ ತುಂಡರಿಸಿದ ಕನ್ನಡ
ಹಲಸಿನ ಕೊಟ್ಟೆ ಕಡುಬು
ನೀರು ದೋಸೆ ಆಸೆ
ಮುಗಿಲು ಕಳಚಿ ಬೀಳುವ ಮಳೆ
ಬೆಳೆಯಬಹುದು ಬೆವರಿನಲ್ಲಿ ಬೆಳೆ
ಆನೆಗುಡ್ಡೆ ಗಣಪ
ಬಾರ್ಕೂರು ದೇವಿ
ಕೋಟೇಶ್ವರ ಕೋಟಿಲಿಂಗ
ಕುಂಭಾಸಿಯ ಹರಿಹರ
ಸಾಲಿಗ್ರಾಮದ ನರಸಿಂಹನ
ನಮಸ್ಕರಿಸಿ ಮುನ್ನೆಡೆ
ಕಡಲ ತಟದಲಿ
ರವೆಯಂತ ಮರಳು
ಮರಳ ಮನೆಯಲಿ
ಮಕ್ಕಳ ಸಂತೆ
ಅವರಿಗಿಲ್ಲ ನಾಳೆಯ ಚಿಂತೆ
ಅಲ್ಲಿ ಹರಿದಾಡುವ ಪ್ರೇಮಿಗಳು
ಮೀನು ಹಿಡಿಯುವ ಬೆಸ್ತರು
ಗೂಡು ಸೇರಲು ಓಡುವ ಏಡಿಗಳು
ಕೇಕೆ ಹಾಕುವ ನವಿಲುಗಳು
ಕಷ್ಟ ಸುಖಗಳ
ಶರಧಿಯ ಏರಿಳಿತಗಳು
ಮಿಂದ ಮನ
ದಡವನ್ನೆ ಸುತ್ತಿಕೊಂಡು
ಮುದ್ದಾಗಿ ಮಲಗಿತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ