ಸೋಮವಾರ, ಜುಲೈ 15, 2013

ವಿಮರ್ಶೆ

ಒಬ್ಬೊಬ್ಬರನ್ನ
ತಕ್ಕಡಿಯಲ್ಲಿ ಹಾಕಿ
ತೂಗಿದರೂ ..
ಅವರವರ  ಭಾರ
ಅವರವರಿಗೆ !

ಅವರು ಅವರೇ
ಇವರು ಅವರಂತಾಗಲಿಲ್ಲ

ಕಣ್ಣಿಗೆ ಕಂಡ ಕೋನದಲ್ಲಿ
ಅಳೆದರೂ
ಕಾಣದ ಕೋನಕ್ಕೆ
ಕನ್ನಡಕ ಬೇಕೆ ?

ಮುನಿಸು 

ಮಾತು ಮಾತನ್ನ; 
ನುಂಗಿ
 ಮುಖ -ಸೋರೆಕಾಯಿ 
 
 
ಒಂದು ಕರಿ ಬೆಕ್ಕು

ಒಂದು ದಿನ
ದಾರಿ ಮದ್ಯ
ಕರಿ ಬೆಕ್ಕು
ಸಿಕ್ಕಿತು

ಮನೆಗೆ ತಂದೆ
ಹಾಲಿಕ್ಕಿದೆ
ಮೈ ಸವರಿದೆ
ಸುಮ್ಮನಾದೆ

ಮನೆಯವರೆಲ್ಲ
ಮೂಗು ಮುರಿದರು
ಅದನ್ನು ಓಡಿಸಲು
ಪ್ರಯತ್ನಿಸಿದರು

ಬೆಕ್ಕು
ಜಾಗ ಬಿಡಲಿಲ್ಲ
ದಿನಕಳೆಯಿತು
ಬೆಕ್ಕೂ ಬಲಿಯಿತು

ಕಾಲ ಗರ್ಭದಲಿ
ಎಲ್ಲಾ ಕರಗಿತು
ಮನೆಯವರೆಲ್ಲಾ
ಹಾಲಿಟ್ಟು
ಎಲ್ಲಿದ್ದಿಯಾ ಟಾಮಿ  ಎಂದರು 



 

ಬುಧವಾರ, ಜುಲೈ 10, 2013

ಉತ್ತರ  ಹುಡುಕುತ್ತಾ ..... 

ಪಂಚಮಹಾಭೂತಗಳ  ನೆರಳಲ್ಲಿ
ತ್ರಿದೋಷ  ತಿಳಿಯಲಿಲ್ಲ
ಯಾರು ತಿಳಿಸಲಿಲ್ಲ
ತಿಳಿಸಲು ಅವರಿಗೆ
ಗೊತ್ತಿತ್ತೋ ಇಲ್ಲವೊ

ಆದರೂ  ತ್ರಿದೋಷಗಳ
ಗಂಟಲಲ್ಲಿ ಇಳಿಸಿ
ಕುಡಿದು
ಪರೀಕ್ಷೆ ಬರೆದು
ಪಾಸಾದೆ

ಸೂಜಿ ಹಿಡಿದು
ಎಲ್ಲಾ ಮರೆತೆ

ಮೊನ್ನೆ ತಮಿಳುನಾಡಿನ
ಟ್ರಿನಿಂಗ್ ನಲ್ಲಿ
ಮತ್ತೆ ತ್ರಿದೋಷ
ಪಂಚಕರ್ಮ ಎಂದರು

ಮತ್ತೆ ತಡಕಾಡಿದೆ
ಅವರವರ
ಜುಟ್ಟಿನಲ್ಲಿ
ತ್ರಿದೋಷಗಳು ಅಲ್ಲಾಡಿದವು
ಕಾಣಿಸಲಿಲ್ಲ

ಪಿ. ಹೆಚ್.ಡಿ.  ಆದವ
ಪರದಾಡುತ್ತಿದ್ದ
ತ್ರಿದೋಷಗಳಲ್ಲೇ
ತಿಣುಕಾಡುತಿದ್ದ
ಹಸಿರು ಉಸಿರಾಡುತಿತ್ತು
ಅರ್ಥ ಅಗದಿದ್ದೆ
ಆಯುರ್ವೇದ
ಅರ್ಥ ಆಗಿದ್ದು  ಅಲೋಪಥಿ
ಕ್ಷಣಿಕ ಸುಖಕ್ಕೆ
ಸುಮ್ಮನಾದೆ

ಗುರುವಿಲ್ಲ
ಗುರಿಯಿಲ್ಲ
ತ್ರಿದೋಷಗಳು ಇವೆಯೇ  ಇಲ್ಲವೇ?
ತಕರಾರು ಬೇಡ
ಪರೀಕ್ಷೆ ಬರೆಯಲು ಹುಡುಗ
ಜೆರಾಕ್ಸ್ ನೋಟ್ಸ್ ನ
ದೂಳು ಕೊಡವುತ್ತಿದ್ದ !

ಪ್ರಶ್ನೆಗೆ ಉತ್ತರ
ಉತ್ತರಕ್ಕೆ ಮತ್ತೆ  ಪ್ರಶ್ನೆಯೇ?



 

ಮಂಗಳವಾರ, ಜುಲೈ 9, 2013

ಮಂಚದ
ಮುಕ್ಕಾಲು
ಬೆಡ್ ನಲ್ಲಿ
ಅoಗಾತ
ಮಲಗಿದರೂ
ಹೊರಳಾಡಿದರು
ಅವಳು
ಬರಲಿಲ್ಲ .... !
 

ಗುರುವಾರ, ಜುಲೈ 4, 2013

chittaara

ಚಿತ್ತಾರ

 ದೇಹ  ಬಾಗಿದಾಗ
ಮನಸು ಮಾಗಿದಾಗ
ಚಿತ್ತವೆಲ್ಲವು ಅವನತ್ತ


ಯೌವನ ಪುಟಿಯುತಿರಲು
ಆಸೆ ಅರಳುತ್ತಿರಲು
ನೋಟವೆಲ್ಲವು  ಅವಳತ್ತ

ಕoಡದ್ದನ್ನು ಕಣ್ಣಲ್ಲಿ  ಕಟ್ಟಿಕೊoಡು
ಮನಸ  ಮೂಸೆಯಲ್ಲಿ   ಕರಗಿಸಿ
ಕೈ ತೋರಿದರು  ಕನ್ನಡದತ್ತ




 

ಸೋಮವಾರ, ಜುಲೈ 1, 2013

rastegalu

ರಸ್ತೆಗಳು

ನೀಟಾದ  ಉಬ್ಬಿದ  ತಗ್ಗಿದ
ಸೀಳಾದ  ಕೊರೆದ
ಮಧ್ಯ ಮಧ್ಯ ತೇಪೆ  ಹಚ್ಚಿದ
ರಸ್ತೆಗಳೇ ಹಾಗೆ

ಹಳೆ ಮುದುಕಿಯ ಸೀರೆಯ
ಕರಿ ತೇಪೆಗಗಳ೦ತೆ

ಒ೦ದೇ ರಸ್ತೆ
ಮುoದೆ  ಮೂರಾಗಿ  ನೂರಾಗಿ
ಕೊನೆಗೆ ಒoದಾಗಿ
ಮುಕ್ತಿ ಪಡೆದoತೆ
 

rastegalu

ರಸ್ತೆಗಳು

ನೀಟಾದ  ಉಬ್ಬಿದ  ತಗ್ಗಿದ
ಸೀಳಾದ  ಕೊರೆದ
ಮಧ್ಯ ಮಧ್ಯ ತೇಪೆ  ಹಚ್ಚಿದ
ರಸ್ತೆಗಳೇ ಹಾಗೆ

ಹಳೆ ಮುದುಕಿಯ ಸೀರೆಯ
ಕರಿ ತೇಪೆಗಗಳ೦ತೆ

ಒ೦ದೇ ರಸ್ತೆ
ಮುoದೆ  ಮೂರಾಗಿ  ನೂರಾಗಿ
ಕೊನೆಗೆ ಒoದಾಗಿ
ಮುಕ್ತಿ ಪಡೆದoತೆ
 

ಶನಿವಾರ, ಜೂನ್ 29, 2013

ಅನಾಲ್ಜಿನ್  ನಗುತಿತ್ತು .....

ಆರೋಗ್ಯಕ್ಕೆ  ಹಾನಿ
ಅನಾಲ್ಜಿನ್ ನೋವು  ನಿವಾರಕ
ಸಂಶೋಧನೆಗಳು  ಬೇಡವೆಂದಿವೆ
ಬೇರೆ  ದೇಶಗಳು
ಮೂಗು ಮುರಿದಿವೆ
ಭಾರತ ಸರ್ಕಾರ ನಿಷೇಧಿಸಿದೆ
ಹಳ್ಳಿಯ ಅಂಗಡಿಯಲ್ಲಿ
ಹಳೇ ವೈದ್ಯನ  ಕೈಯಲ್ಲಿ
ಅನಾಲ್ಜಿನ್ ಇನ್ನೂ ನಗುತ್ತಿದೆ

ಸಂಶೋಧನೆಗಳು  ಮೊದಲು
ಹುಡುಕಿ ಶೋಧಿಸಿ ಬೇಕೆಂದವು
ಈಗ ಅದರೊಳಗಿದ್ದುದ್ದನ್ನ ಕೆದಕಿ
ಬೇಡ ಎನ್ನುತ್ತಿವೆ
ಇಲ್ಲಿಯವರಿಗೆ ನುಂಗಿದವರ ನಷ್ಟಕೆ
ಹೊಣೆ ಯಾರು ?

ಇದಾವ ಪರಿವೆಯಿಲ್ಲದೆ
ಹೊಸ ರೋಗಕೆ
ಹಳೆ ಮುದುಕಿ ಮದ್ದರೆಯುತ್ತಿದ್ದಳು !

  ಡಾ. ನಾಗೇಂದ್ರ  ಮಲ್ಲಾಡಿಹಳ್ಳಿ 

ಗುರುವಾರ, ಮೇ 9, 2013

ಕೈ

ಕೈ ತೋರಿಸಿದಿರಿ
ಕೈ ಬೀಸಿದಿರಿ
ಕೈ ಕೊಟ್ಟಿರಿ (ಹಸ್ತ ಲಾಘವ )
ಕೈ ಮಾಡಿ ಕರೆದಿರಿ
ಕೈ ಮುಗಿದಿರಿ
ಕೈ ಗೆಲ್ಲಿಸಿ ಎಂದಿರಿ
ಕೈ

ಪ್ರಣಾಳಿಕೆಯ ಪ್ರಾಣವಾಗಿ


 

ಮಂಗಳವಾರ, ಮೇ 7, 2013


 

ಕವನ ಬರಿಯಯ್ಯ

ಕಿಸಿದವಳ ನಗು ನೋಡಿ
ಹಸಿದವಳ ಹೊಟ್ಟೆ ನೋಡಿ
ಕಾಡುವ ಭಿಕ್ಷುಕನಿಗೆ ನೀಡಿ
ಪ್ರಕೃತಿ ಮಾತೆಯ ಬೇಡಿ

ಕವನ ಬರಿಯಯ್ಯ
ಬರೆಯುತಾ ಕೂತರೆ
ತಾನೆ ಎದ್ದು ಓಡುವುದಯ್ಯ

ಮುತ್ತಿಕ್ಕಲು ದುಂಬಿ ಓಡಿ
ಮೆತ್ತಗಾಯ್ತು ಕನಸ ಮೋಡಿ
ಕಲ್ಪೆನೆಯ ಜೋತೆಯಾಡಿ
ಮನಸಿನಲ್ಲಿದುದ್ದನ್ನ ಮೆತ್ತಗೆ ಮಾಡಿ

ಕವನ ಬರಿಯಯ್ಯ
ಬರೆಯುತಾ ಕೂತರೆ
ತಾನೆ ಎದ್ದು ಓಡುವುದಯ್ಯ

ಹಸಿ ಅನುಭವಗಳ ಬಿಸಿ ಮಾಡಿ
ಆಸೆಯ ಆಗಸದಲಿ ತೇಲಾಡಿ
ಜೀವನ ಬಸ್ಸಿನಲ್ಲಿ ನೂಕಾಡಿ
ಆಡುವ ಮಕ್ಕಳ ಜೊತೆಗೂಡಿ

ಕವನ ಬರಿಯಯ್ಯ
ಬರೆಯುತಾ ಕೂತರೆ
ತಾನೆ ಎದ್ದು ಓಡುವುದಯ್ಯ !!!

ಅಯ್ಯ, ಸ್ನಿಗ್ದ ಪ್ರೀತಿಯಲಿ
ಮುಳುಗಿ
ಮುoದೆ ....... ಅದೇ
ಧ್ಯಾನದ  ಹಾದಿ ಕಣಯ್ಯಾ .


 

ಸೋಮವಾರ, ಮೇ 6, 2013

ಮನಸು ಮಲಗಿತು

ಆಹಾ.... ಕುಂದಾಪುರ

ಅಲ್ಲಿಗೆ ಹೋಗಬೇಕು ಸರ ಸರ
...
ಆಗುಂಬೆಯ ಸಂಜೆ ಸೂರ್ಯನ

ಕಣ್ಣಲ್ಲಿ ಕಟ್ಟಿಕೊಂಡು

ಹಾವಿನಂತೆ ಸುತ್ತಿಕೊಂಡು

ಕನಸ ಕ್ಯಾಮರ ಹೊತ್ತುಕೊಂಡು

ಸಾಗು... ಭಾವನೆಗಳ ಮೆತ್ತಿಕೊಂಡು



ಅವಸರಕ್ಕೆ ತುಂಡರಿಸಿದ ಕನ್ನಡ

ಹಲಸಿನ ಕೊಟ್ಟೆ ಕಡುಬು

ನೀರು ದೋಸೆ ಆಸೆ

ಮುಗಿಲು ಕಳಚಿ ಬೀಳುವ ಮಳೆ

ಬೆಳೆಯಬಹುದು ಬೆವರಿನಲ್ಲಿ ಬೆಳೆ



ಆನೆಗುಡ್ಡೆ ಗಣಪ

ಬಾರ್ಕೂರು ದೇವಿ

ಕೋಟೇಶ್ವರ ಕೋಟಿಲಿಂಗ

ಕುಂಭಾಸಿಯ ಹರಿಹರ

ಸಾಲಿಗ್ರಾಮದ ನರಸಿಂಹನ

ನಮಸ್ಕರಿಸಿ ಮುನ್ನೆಡೆ



ಕಡಲ ತಟದಲಿ

ರವೆಯಂತ ಮರಳು

ಮರಳ ಮನೆಯಲಿ

ಮಕ್ಕಳ ಸಂತೆ

ಅವರಿಗಿಲ್ಲ ನಾಳೆಯ ಚಿಂತೆ



ಅಲ್ಲಿ ಹರಿದಾಡುವ ಪ್ರೇಮಿಗಳು

ಮೀನು ಹಿಡಿಯುವ ಬೆಸ್ತರು

ಗೂಡು ಸೇರಲು ಓಡುವ ಏಡಿಗಳು

ಕೇಕೆ ಹಾಕುವ ನವಿಲುಗಳು

ಕಷ್ಟ ಸುಖಗಳ

ಶರಧಿಯ ಏರಿಳಿತಗಳು

ಮಿಂದ ಮನ

ದಡವನ್ನೆ ಸುತ್ತಿಕೊಂಡು

ಮುದ್ದಾಗಿ ಮಲಗಿತು




DºÁ.....PÀÄAzÁ¥ÀÄgÀ
C°èUÉ ºÉÆÃUÀ¨ÉÃPÀÄ ¸ÀgÀ¸ÀgÀ
DUÀÄA¨ÉAiÀÄ ¸ÀAeÉ ¸ÀÆAiÀÄð£À
PÀtÚ°è PÀnÖPÉÆAqÀÄ  
WÁnAiÀÄ°è ºÁ«£ÀAvÉ ¸ÀÄwÛPÉÆAqÀÄ
PÀ£À¸À PÁåªÀÄgÀ ºÉÆvÀÄÛ
ªÀÄ£À¸ÀÄ ªÀÄvÀÛUÉ ¸Àj¹

 CªÀ¸ÀgÀPÉ vÀÄAqÀj¹zÀ
PÀÄAzÁ¥ÀÄgÀzÀ PÀ£ÀßqÀ
ºÀ®¹£À PÉÆmÉÖ PÀqÀħÄ
¤ÃgÀÄ zÉÆÃ¸ÉAiÀÄ D¸É
ªÀÄÄV®Ä PÀ¼Àa ©¼ÀĪÀ ªÀļÉ
¨É¼ÉAiÀħºÀÄzÀÄ ¨ÉªÀj£À°è ¨É¼É

 D£ÉUÀÄqÉØ UÀt¥À
¨ÁPÀÆðgÀÄ zÉë
PÉÆÃmÉÖñÀégÀzÀ PÉÆÃn°AUÀ
PÀÄA¨sÁ¹AiÀÄ ºÀjºÀgÀ
¸Á°UÁæªÀÄzÀ £ÀgÀ¹AºÀ£À
£ÀªÀĸÀÌj¹

 PÀqÀ® vÀlz°
gÀªÉAiÀÄAvÀ ªÀÄgÀ¼ÀÄ
ªÀÄgÀ¼À ªÀÄ£ÉAiÀİ
DlªÁqÀĪÀ ªÀÄPÀ̼À ¸ÀAvÉ
CªÀjV®è AiÀiÁªÀÅzÉà aAvÉ

 C°è ¥ÉæÃ«ÄUÀ¼ÀÄ
«ÄãÀÄ »rAiÀÄĪÀ ¨É¸ÀÛgÀÄ
UÀÆqÀÄ ¸ÉÃgÀĪÀ KrUÀ¼ÀÄ
CPÀÌ ¥ÀPÀÌzÀ°£À PÉÃPÉ ºÁPÀĪÀ £À«®ÄUÀ¼ÀÄ
PÀµÀÖ ¸ÀÄRUÀ¼ÀAvÀ ±ÀgÀ¢üAiÀÄ Jj½vÀUÀ¼ÀÄ
 PÀqÀ®¯Éè «ÄAzÀ ªÀÄ£À¸ÀÄ
¥ÀæPÀÈw ZÁ¥ÉAiÀÄ°è ¸ÀÄwÛPÉÆAqÀÄ
ªÀÄ®VvÀÄ.

 

 

 

 

ಶನಿವಾರ, ಮೇ 4, 2013

ತೊಟ್ಟಿಲ ಮದ್ದು


ಭತ್ತದ ಅರಳು ಅಥವಾ ಹುಳ್ಳಿ ಕಾಳು ಹುರಿದಂಗೆ ಪಟ ಪಟನೆ ಮಾತನಾಡುವ ಚುರುಕಾದ ಮಕ್ಕಳನ್ನು ಕಂಡಾಗ "ನಿನ್ನ ಬಾಯಿಗೆ ಬಜೆ ಹಾಕ್ದೊರ್ ಯಾರು ಮಾರಾಯ ?"ಎನ್ನುತೇವೆ .
ಮಾತಿಗೂ ಬಜೆಗೂ ನಿಕಟ ಸಂಬಂಧವಿದೆ. ಸಂಸ್ಕೃತದಲ್ಲಿ ಬಜೆಗೆ ವಚ ಎನ್ನುವರು.
 ವಚನ(ಮಾತಿನ) ಶಕ್ತಿಯನ್ನು ಹೆಚ್ಚಿಸುವ ಗುಣವಿರುವುದರಿಂದ ಬಜೆಗೆ ವಚ ಎನ್ನುತಾರೆ. ಮಗುವಿನ ನಾಮಕರಣ ಸಂದರ್ಭದಲ್ಲಿ ಬಜೆ ಮತ್ತು ಬಂಗಾರವನ್ನು ತೇದು ಮಗುವಿಗೆ ಸೋದರಮಾವ ನೆಕ್ಕಿಸುವ ಸಂಪ್ರದಾಯವಿದೆ. ಸ್ವರಕ್ಕೆ ಹಿತವಾಗಿ ಮತ್ತು ಮಾತಿನ ಶಕ್ತಿಯನ್ನು ವರ್ಧಿಸುವದರಿಂದ "ವಾಕ್ ಸ್ವರಪ್ರದ" ವಾಗಿದೆ. ಪುರಾತನ ವೈದ್ಯಶಾಸ್ತ್ರ  ಬಜೆಯ ಸ್ವರೂಪ ಮತ್ತು ಕಾರ್ಯವನ್ನು ವರ್ಣಿಸಿದೆ. ಕಂದವು ಅರುಣ ಬಣ್ಣವಿರುವುದರಿಂದ ಅರುಣ ,ಸೂಕ್ಷ್ಮ ಬೇರುಗಳನ್ನು ಹೊಂದಿರುವುದರಿಂದ ಗೋಲೊಮಿ ,ಲೊಮಶಿ , ಕಂದವು ಗಣ್ಣುಗಳಿಂದ ಕೂಡಿರುವದರಿಂದ ಶತಪರ್ವಕ ,ದೇಹದ ಕೊಬ್ಬನ್ನು ಕರಗಿಸುವದರಿಂದ ಕರ್ಷಿಣಿ , ದುಷ್ಟ ಗ್ರಹಗಳನ್ನು ದೊರಮಾಡುವುದರಿಂದ ಭೂತನಾಶಿನಿ , ರೋಗಗಳನ್ನು ಗೆಲ್ಲುವುದರಿಂದ ವಿಜಯ ಮತ್ತು ಶುಭಕರವಾಗಿರುವುದರಿಂದ ಮಾಂಗಲ್ಯ ಎಂದು ಪ್ರಚಲಿತ. 

ಶುಕ್ರವಾರ, ಮೇ 3, 2013

ನಾ ಕಾಣೆ

 ಓಟಿಗಾಗಿ .....  
ಹಲವು ಆಣೆ ಪ್ರಮಾಣ
ಲಿಂಗ ಶಿವದಾರ ಜನಿವಾರದಾಣೆ
ತಿಮ್ಮಪ್ಪನ ಮೇಲೆ ಆಣೆ
ಅಪ್ಪ ಅಮ್ಮನಾಣೆ
ಮಕ್ಕಳು ಮೊಮ್ಮಕ್ಕಳಾಣೆ
ಹಾಲು ,ನೀರು
ನಾಗವಲ್ಲಿ ಮೇಲಾಣೆ

ಕುಡಿಕುಡಿದು
ಮತಗಟ್ಟೆ ಮರೆತು
ಆಣೆ ನಿಶೆಯಲಿ ಬೆರೆತು
ಒತ್ತಾಯ ಮಾಡಿದರೆ
ಯಾವ ಗುರುತಿಗೆ
ಯಾರಿಗೆ ಒತ್ತುತ್ತಾನೋ ?
ನಾ ಕಾಣೆ
ದೇವರ ಮೇಲಾಣೆ

ಡಾ .ನಾಗೇoದ್ರ ಮಲ್ಲಾಡಿಹಳ್ಳಿ












  

ಗುರುವಾರ, ಮೇ 2, 2013


ಮಲ್ಲಿಗೆ


ಯಾರು ನೆಟ್ಟರೋ ,ಬಿಟ್ಟರೋ
ಹುಲುಸಾಗಿ ಬೆಳೆದಿದೆ
ಬಲಿತು
ಬಾಹುಗಳ ಚಾಚಿ
ಆಲಿವಾಣದ ಮರ ತಬ್ಬಿ
ಎಲ್ಲರ ಕಣ್ಣು ಕುಕ್ಕುತಿದೆ
ಮಲ್ಲಿಗೆಯ ಬಳ್ಳಿ
ನೋಡಬೆಕೀಗ ಎಲ್ಲರ ಕಳಕಳಿ

ಹೂ ಮಾರುವ
ಪುಟ್ಟಿಯಲ್ಲಿ
ನನ್ನವಳ ತುರುಬಿನಲ್ಲಿ
ದೇವರ ನೆತ್ತಿಯಲ್ಲಿ
ಪೂಜಾರಿಯ ಪ್ರಸಾದದಲ್ಲಿ
ಮಧು ಚಂದ್ರದ ಮಂಚದಲ್ಲಿ

ಬಿಳಿ ತೊಗಲಿನ ಕೊರಳಲ್ಲಿ
ತೂಗುವ ತೊಟ್ಟಿಲಲ್ಲಿ
ಸನ್ಮಾನದ ಸಂತೆಯಲ್ಲಿ
ಪಂಚಭೂತಗಳ ಪಯಣದಲ್ಲಿ
ಮೂಗು ,ಮನಸಿನ ಮನೆಯಲ್ಲಿ
ಭಾವನೆಗಳ ಬಿಲಗಳಲಿ
ಕಣ್ ಬಿಡುತ್ತೆ ಪಿಳಿಪಿಳಿ

ದುಂಡು ಸೂಜಿ ಜಾಜಿ
ಮೈಸೂರು ಮಂಗಳೂರು
ಶಂಕರಪುರದ
ನನ್ನೂರ ನಿನ್ನೂರ
ಘಮ ಘಮ ಮಲ್ಲಿಗೆ
ಯಾರು ನೆಟ್ಟರೇನು ,ಬಿಟ್ಟರೇನು
ಕಾಲತೆಕ್ಕೆಯಲಿ ಮೈ ಮರೆಯುವಳು
ಮೆಲ್ಲಗೆ !
ಡಾ. ನಾಗೇoದ್ರ ಮಲ್ಲಾಡಿಹಳ್ಳಿ

ಮಲ್ಲಿಗೆ 


ಯಾರು ನೆಟ್ಟರೋ ,ಬಿಟ್ಟರೋ
ಹುಲುಸಾಗಿ ಬೆಳೆದಿದೆ
ಬಲಿತು
ಬಾಹುಗಳ ಚಾಚಿ
 ಆಲಿವಾಣದ ಮರ ತಬ್ಬಿ
ಎಲ್ಲರ ಕಣ್ಣು ಕುಕ್ಕುತಿದೆ
ಮಲ್ಲಿಗೆಯ ಬಳ್ಳಿ
ನೋಡಬೆಕೀಗ ಎಲ್ಲರ ಕಳಕಳಿ

ಹೂ ಮಾರುವಬಿಲಗಳಲಿ ವಳ
ಪುಟ್ಟಿಯಲ್ಲಿ
ನನ್ನವಳ ತುರುಬಿನಲ್ಲಿ
ದೇವರ ನೆತ್ತಿಯಲ್ಲಿ
ಪೂಜಾರಿಯ ಪ್ರಸಾದದಲ್ಲಿ 
ಮಧು ಚಂದ್ರದ ಮಂಚದಲ್ಲಿ
ಬಿಳಿ ತೊಗಲಿನ ಕೊರಳಲ್ಲಿ
ತೂಗುವ ತೊಟ್ಟಿಲಲ್ಲಿ
ಸನ್ಮಾನದ ಸಂತೆಯಲ್ಲಿ
ಪಂಚಭೂತಗಳ ಪಯಣದಲ್ಲಿ
ಮೂಗು ,ಮನಸಿನ ಮನೆಯಲ್ಲಿ
ಭಾವನೆಗಳ  ಬಿಲಗಳಲಿ
ಕಣ್ ಬಿಡುತ್ತೆ  ಪಿಳಿಪಿಳಿ

ದುಂಡು ಸೂಜಿ ಜಾಜಿ
ಮೈಸೂರು ಮಂಗಳೂರು
ಶಂಕರಪುರದ
ನನ್ನೂರ ನಿನ್ನೂರ
ಘಮ ಘಮ ಮಲ್ಲಿಗೆ
ಯಾರು ನೆಟ್ಟರೇನು ,ಬಿಟ್ಟರೇನು
ಕಾಲತೆಕ್ಕೆಯಲಿ ಮೈ ಮರೆಯುವಳು
ಮೆಲ್ಲಗೆ !

ಡಾ. ನಾಗೇoದ್ರ ಮಲ್ಲಾಡಿಹಳ್ಳಿ





 

ಬುಧವಾರ, ಮೇ 1, 2013

ನೀವು  ದಪ್ಪವಾಗಬೇಕೇ?

 
ಸಣಕಲು ಸುಮಳ ಮದುವೆ ಫಿಕ್ಸ್ ಆಯ್ತು . ಮೈ,ಕೈ ತುಂಬಿಕೊಂಡು ಸುಂದರವಾಗಿ ಕಾಣುವಾಸೆ ಚಿಗುರೊಡೆಯಿತು . ಕುಳಿ ಬಿದ್ದ ಕೆನ್ನೆಗಳಿಗೆ ಕೊಬ್ಬು ತುಂಬಿಕೊಳ್ಳುವ ತವಕ ಹೆಚ್ಚಾಯ್ತು . ಹೀಗೆ ಕೆಲವು ಸಂದರ್ಭಗಳು ,ಹಲವರ ಟೀಕೆಗಳು ಸಣ್ಣಗಿದ್ದವರನ್ನು ದಪ್ಪಗಾಗಲು ಪ್ರೇರೆಪಿಸುತ್ತವೆ . 
 
ನೀವು ತೆಳ್ಳಗಿದ್ದೀರಾ ? ಸದೃಢ ಮೈಕಟ್ಟನ್ನು ಹೊಂದಿ ,ದೇಹದ ತೂಕ ಹೆಚ್ಚಿಸಿಕೊಳ್ಳಬೇಕೆ? ದಪ್ಪಗಾಗಲು ಗ್ಯಾರಂಟಿ ಔಷಧಿ ಕೊಡುತೇವೆ . ಎನ್ನುವ ವಿವಿಧ ಮಾಧ್ಯಮಗಳ ಜಾಹೀರಾತುಗಳು ತೆಳ್ಳಗಿದವರನ್ನ ತಬ್ಬಿಕೊಳ್ಳಲು
ತುದಿಗಾಲಲ್ಲಿವೆ. ಜನರು ಸಹ ಅಕ್ಕಿ,ರಾಗಿಯಂತೆ ಔಷಧಿ ಕೊಳ್ಳಲು ಪ್ರಾರಂಭಿಸಿದ್ದಾರೆ. ತೆಳ್ಳಗಾಗಲು ,ಬೆಳ್ಳಗಾಗಲು ,ದಪ್ಪಗಾಗಲು 
ಬೋಳುತಲೆ ಚಿಗುರೊಡೆಯಲು ,ಬುದ್ದಿವಂತರಾಗಲು ತಾವೇ ಔಷಧಿ ಖರೀದಿಸುವುದು ಸಮಂಜಸವಲ್ಲ . 
 
ಸಣ್ಣಗಿದ್ದವರು ದಪ್ಪ ,ದಪ್ಪಗಿದ್ದವರು ಸಣ್ಣಗಾಗುವ ಟ್ರೆಂಡ್ ಹೊಸದೇನೂ ಅಲ್ಲ. ಸಾವಿರಾರು ವರ್ಷಗಳ ಹಿಂದೆಯೇ ದೇಹದ 
ಆಕೃತಿಯ ಆಧಾರದ ಮೇಲೆ ಎರಡು ವಿಧ ಚಿಕಿತ್ಸೆಗಳನ್ನು ತಿಳಿಸಿದ್ದಾರೆ. ಆಯುರ್ವೇದದ 'ಅಷ್ಟಾಂಗ ಹೃದಯದಲ್ಲಿ' ತೆಳ್ಳಗಿದ್ದವರನ್ನು 
ದಪ್ಪ ಮಾಡುವ ಬೃಂಹಣ (ಸಂತರ್ಪಣ ) ಮತ್ತು  ದಪ್ಪಗಿದ್ದವರನ್ನು ತೆಳ್ಳಗೆ ಮಾಡುವ ಲಂಘನ (ಅಪತರ್ಪಣ )ವಿಧಾನಗಳನ್ನು 
ವಿವರಿಸಿದ್ದಾರೆ . 

ಬೃಂಹಣ ಚಿಕಿತ್ಸೆ 

ತೆಳ್ಳಗಿದವರನ್ನು ದಪ್ಪಮಾಡುವುದೇ ಬೃಂಹಣವಾಗಿದೆ . ಶಾಸ್ತ್ರದಲ್ಲಿ ಮನೋದೈಹಿಕ ತಳಹದಿಯ ಮೇಲೆ ರೂಪಿಸಿರುವ ಈ ಚಿಕಿತ್ಸೆ ಆಹಾರ, ಔಷಧಿಗಳ  ಮಿಶ್ರಣವಾಗಿದೆ. 

ಯಾರಿಗೆ ಬೇಕು ಬೃಂಹಣ 

  • ಅತಿಮದ್ಯಸೇವನೆ ,ಅತಿಯಾದ ಲೈಂಗಿಕ ಕ್ರಿಯೆ ,ಭಾರವಾದ ವಸ್ತುಗಳನ್ನು ಹೊರುವವರು (ಕೊಲಿ ಕೆಲಸ ಮಾಡುವವರು ),ಕಷ್ಟಪಡುವವರು ,ಅತಿ ದೂರ ಪ್ರಯಾಣ ಮಾಡುವವರು ,ದುರ್ಬಲರು ,ವಾತದೋಷದಿಂದ ಬಳಲುತಿರುವವರು ಬೃಂಹಣ ಚಿಕಿತ್ಸೆ ತೆಗೆದುಕೊಳ್ಳಬೇಕು. 
  • ಆರೋಗ್ಯವಂತರು ಸಹ ಆರೋಗ್ಯ ಕಾಪಾಡಿಕೊಳ್ಳಲು ಬೃಂಹಣ ಉತ್ತಮವಾಗಿದೆ. 
  • ಮಕ್ಕಳು ,ವಯಸ್ಸಾದವರು ,ಗರ್ಭಿಣಿ ಮತ್ತು ಸೂತಿಕ ಅವಸ್ಥೆಗಳಲ್ಲಿ ಉಪಯೋಗಿಸಲೇ ಬೇಕು. 
  • ಚಿಂತೆ ಮಾಡುವವರು
  • ಗ್ರೀಷ್ಮ ಋತುವಿನಲ್ಲಿ  ಈ ಎಲ್ಲಾ ಸಂದರ್ಭಗಳಲ್ಲಿ ಶಕ್ತಿ ವರ್ಧನೆಗಾಗಿ ,ಮನೋದೈಹಿಕ ಕ್ಷಮತೆಯನ್ನು ಹೆಚ್ಚಿಸಲು ಬೃಂಹಣ ಚಿಕಿತ್ಸೆ ಸಹಕಾರಿಯಾಗಿದೆ.

  ಬೃಂಹಣೀಯ ಆಹಾರ

ಸಿಹಿ ಮತ್ತು ಜಿಡ್ಡಿನಿಂದ ಕೂಡಿದ ಯಾವುದೇ ಪದಾರ್ಥ ಬೃಂಹಣವಾಗಿದೆ. ಉದಾ:ಮಾಂಸ ,ಹಾಲು,ತುಪ್ಪ ಮುಂತಾದ ಸಿಹಿ ಮತ್ತು ಜಿಡ್ಡಿನ ಆಹಾರ. ಮಾಂಸವು ಉತ್ತಮ ಬೃಂಹಣೀಯ. ಮಾಂಸಕ್ಕೆ ಸಮಾನವಾದ ಬೃಂಹಣ ಆಹಾರ ಮತ್ತೊಂದಿಲ್ಲ. ಅದಕ್ಕೆ ಗ್ರಂಥಗಲ್ಲಿ  "ನಹಿ ಮಾಂಸ ಸಮo " ಎಂದಿದ್ದಾರೆ . ಇಂದು ನಾವು ಸೇವಿಸುತ್ತಿರುವ ಆಹಾರ ಕಳಪೆ ಮತ್ತು ಕಲಬೆರಕೆ. 
ಶುದ್ದವಾದ , ಸ್ವಾಭಾವಿಕವಾದ ,ಉತ್ತಮ ಗುಣಮಟ್ಟದ ಆಹಾರ ಸೇವಿಸಬೇಕು. 
 
ಮನೋ ಬೃಂಹಣ: ನೀವು ದಪ್ಪವಾಗಬೇಕೆ ? ಮೊದಲು ನೆಮ್ಮದಿಯಿಂದಿರಿ . 
 
ಅಚಿಂತೆ : ಚಿಂತೆ ಹಲವು ರೋಗಗಳಿಗೆ ಮೂಲ. "ಚಿಂತೆ ಇಲ್ಲದವನಿಗೆ ಸಂತೆಗೆ ನಿದ್ದೆ ಬಂತಂತೆ"  ಚಿಂತೆಯು ಮಾಡುವದರಿಂದ ಸಣ್ಣಗಾಗುತ್ತಾರೆ. ಆದುದರಿಂದ ಚಿಂತೆ ಮಾಡದಿರುವುದು ಒಳ್ಳೆಯದು. 
ಹರ್ಷಣ : ಹರ್ಷಣವೆಂದರೆ ಸಂತೋಷ. ಸಂತೋಷವೆ ಆರೋಗ್ಯ. ದುಃಖವೆ ರೋಗ . ಸದಾ ಸಂತೋಷದಿಂದದಿರಬೇಕು. 
ನಿವೃತಿ :ತೃಪ್ತಿಯೇ ನಿವೃತಿ . ಇದ್ದುದರಲ್ಲೇ ತೃಪ್ತಿಕರ ಜೀವನ ನಡೆಸಬೇಕು. 
ಸಪ್ನ : ನಿದ್ರೆ ಮನುಷ್ಯನಿಗೆ ಚೈತನ್ಯ ಮತ್ತು ಆರೋಗ್ಯ ನೀಡುವುದು. ಸುಖ ನಿದ್ರೆ ಮನುಷ್ಯನನ್ನು ದಪ್ಪ ಮಾಡುವದು.
ಅಭ್ಯಂಗ : ಎಣ್ಣೆಯನ್ನು ನಿಯಮನುಸಾರವಾಗಿ ಮೈಗೆ ತಿಕ್ಕುವುದಕ್ಕೆ ಅಭ್ಯಂಗ ಏನ್ನುವರು . ಈ ಕ್ರಿಯೆ ವಾತದೋಷವನ್ನು ಕಡಿಮೆ ಮಾಡುವದಲ್ಲದೆ ಶರೀರಕ್ಕೆ ಬಲ ನೀಡುವದು.
ಸ್ನಾನ :ಸ್ನಾನ ಮಾಡುವದರಿಂದ ಹಸಿವು ಹೆಚ್ಹುವದು. ಶರೀರದ ಮಲ ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ನೀಡುವದು.

ಸಣ್ಣಗಿರುವವರನ್ನು ದಪ್ಪ ಮಾಡಲು ಕೇವಲ ಒಂದು ಔಷಧಿ ಸಾಕೆ? ಸ್ವಯಂ ವೈದ್ಯರಾಗಬೇಡಿ ಜೋಕೆ. ದಪ್ಪ ಮಾಡುವ ಚಿಕಿತ್ಸೆ
ವ್ಯಕ್ತಿಗಿಂತ ವ್ಯಕ್ತಿಗೆ ಭಿನ್ನವಾಗಿದೆ. ರೋಗಿಯ ಮನೋದೈಹಿಕ ಸ್ಥಿತಿಯನ್ನು ಅರಿತು, ಉತ್ತಮ ಆಹಾರ ,ವಿಹಾರ ಮತ್ತು ಔಷಧಿಗಳನ್ನು ಪ್ರಯೋಗಿಸಿದರೆ ಸಣಕಲು, ಬಡಕಲು ದೇಹದವರು ದಪ್ಪವಾಗಿ ಸುಂದರವಾಗಿ ಕಾಣಬಹುದು.

ಡಾ. ಎಂ. ನಾಗೇoದ್ರ ಮಲ್ಲಾಡಿಹಳ್ಳಿ
 
 
 
 
 
  •  
ಅಭ್ಯಂಗ : ಎಣ್ಣೆಯನ್ನು ನಿಯಮನುಸಾರವಾಗಿ ಮೈಗೆ ತಿಕ್ಕುವುದಕ್ಕೆ ಅಭ್ಯಂಗ ಏನ್ನುವರು . ಈ ಕ್ರಿಯೆ ವಾತದೋಷವನ್ನು ಕಡಿಮೆ ಮಾಡುವದಲ್ಲದೆ ಶರೀರಕ್ಕೆ ಬಲ ನೀಡುವದು.
ಸ್ನಾನ :ಸ್ನಾನ ಮಾಡುವದರಿಂದ ಹಸಿವು ಹೆಚ್ಹುವದು. ಶರೀರದ ಮಲ ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ನೀಡುವದು.

ಸಣ್ಣಗಿರುವವರನ್ನು ದಪ್ಪ ಮಾಡಲು ಕೇವಲ ಒಂದು ಔಷಧಿ ಸಾಕೆ? ಸ್ವಯಂ ವೈದ್ಯರಾಗಬೇಡಿ ಜೋಕೆ. ದಪ್ಪ ಮಾಡುವ ಚಿಕಿತ್ಸೆ
ವ್ಯಕ್ತಿಗಿಂತ ವ್ಯಕ್ತಿಗೆ ಭಿನ್ನವಾಗಿದೆ. ರೋಗಿಯ ಮನೋದೈಹಿಕ ಸ್ಥಿತಿಯನ್ನು ಅರಿತು, ಉತ್ತಮ ಆಹಾರ ,ವಿಹಾರ ಮತ್ತು ಔಷಧಿಗಳನ್ನು ಪ್ರಯೋಗಿಸಿದರೆ ಸಣಕಲು, ಬಡಕಲು ದೇಹದವರು ದಪ್ಪವಾಗಿ ಸುಂದರವಾಗಿ ಕಾಣಬಹುದು.

                                                                                                      ಡಾ. ಎಂ. ನಾಗೇoದ್ರ ಮಲ್ಲಾಡಿಹಳ್ಳಿ

 

ಸೋಮವಾರ, ಏಪ್ರಿಲ್ 29, 2013


ಮನೆ 

ಸೂರ್ಯನ  ಸಿಟ್ಟು  ಹೀರಿ 

ತನ್ನೊಡೆಯನ  ತಂಪಾಗಿಸುವ 

ಕರಿ ಹೆಂಚಿನ ಮನೆ 

ಬೇಸಿಗೆಯ ನೆಮ್ಮದಿ ಮನೆ

 
ಮನೆ ಹಲವು 

ಹುಲ್ಲಿನ,ಹಾಪಿನ 

ತೆಂಗಿನ ಗರಿಯ 

ಅಡಿಕೆ ದಬ್ಬೆಯ 

ಲಕ್ಕಿಯ,ಬಿದುರಿನ 

ಮಣ್ಣಿನ,ಕಲ್ಲಿನ

ಕರಿ,ಕೆಂಪು ಹೆಂಚಿನ 

ಕಬ್ಬಿಣ,ಸಿಮೆಂಟಿನ

RCC ಯ ಅರಮನೆ !

 

ಭೂತಾಯ ಮಡಿಲಲಿ 

ಆಗಸವ ಹೊದ್ದು 

ಮಲಗಿದವನ ಮನೆ 

ಆನಂದದ ಮನೆ 

ಎಲ್ಲರಿರುವುದು

 ಬಾಡಿಗೆ ಮನೆ 

ಲಕ್ಷ ,ಕೋಟಿ ಹಾಕಿ 

ಬಡಿದಾಡಿ ಕಟ್ಟುವರು 

ಬಹುಮಹಡಿ ಭ್ರಾಂತಿ ಮನೆ

 ಅದು ನಮ್ಮನೆ

ಇದು ನಿಮ್ಮನೆ 

 ಅಲ್ಲಿರುವನು ಸುಮ್ಮನೆ !

 

ಡಾ . ನಾಗೇoದ್ರ  ಮಲ್ಲಾಡಿಹಳ್ಳಿ

 
 
 





 

ಮಳೆ 

ಮೋಡದ  ನೆಲದಲ್ಲಿ 

ಮಿಂಚಿನ  ರಂಗವಲ್ಲಿ 

ಗುಡುಗಿನ ವಾದ್ಯ 

ಆಲಿಕಲ್ಲಿನ ಅಕ್ಷತೆ 

ಮಳೆಯ ಮೆರವಣಿಗೆ 

ಭಾನುವಾರ, ಏಪ್ರಿಲ್ 28, 2013

ನಾಯಕ-ಕಾಯಕ

ಚುನಾವಣೆಗೆ ಮುನ್ನ
ನಾಯಿಯಂತೆ
ಹಿಂಡು ಕಟ್ಟಿಕೊಂದು
ಮನೆ ಮನೆಗೊ
ಮತ ಯಾಚಿಸುವವನೆ
ನಾಯಕ

ಚುನಾವಣೆ ನಂತರ
ಹುಚ್ಚು ನಾಯಿತರ
ಗೆದ್ದ ನಾಯಕನನ್ನು
ಹುಡುಕುವುದೇ ...
ಮತ ಕೊಟ್ಟವನ
ಕಾಯಕ !
ಡಾ. ನಾಗೇoದ್ರ ಮಲ್ಲಾಡಿಹಳ್ಳಿ
ನಾಯಕ-ಕಾಯಕ

ಚುನಾವಣೆಗೆ ಮುನ್ನ
ನಾಯಿಯಂತೆ
ಹಿಂಡು ಕಟ್ಟಿಕೊಂದು
 ಮನೆ ಮನೆಗೊ
ಮತ ಯಾಚಿಸುವವನೆ
ನಾಯಕ

ಚುನಾವಣೆ ನಂತರ
ಹುಚ್ಚು ನಾಯಿತರ
ಗೆದ್ದ ನಾಯಕನನ್ನು
ಹುಡುಕುವುದೇ ...
ಮತ ಕೊಟ್ಟವನ
ಕಾಯಕ !


 

ಗುರುವಾರ, ಏಪ್ರಿಲ್ 25, 2013

ಹದ್ದಿನ ಕಣ್ಣು

ಚುನಾವಣ ಆಯೋಗದ
ಹದ್ದಿನ ಕಣ್ಣು
ಅಕ್ರಮಗಳಿಗೆ
ತಿನ್ನಲಾರದ ಗಿಣ್ಣು

ಅಬ್ಬರದ ಪ್ರಚಾರವಿಲ್ಲ್ಲ
ಸೀರೆ,ಪಂಚೆಯ ಸುಗ್ಗಿಯಿಲ್ಲ
ನಾಲಿಗೆಗೂ ತಿರುವುಗಳಿಲ್ಲ
ಹಂಚುವ ಹಣಕ್ಕೂ ಕತ್ತರಿ

ಮದ್ಯದ ಮಳಿಗೆಗೆ
ಸಿ ಸಿ ಟೀವಿ ಕ್ಯಾಮರ
ಸಂಜೆ ಸಲ್ಲಿಸಬೇಕು
ಕುಡುಕನ ಗಣಿತ
ನುಸುಳುವ ಸಂತ್ರಾ,ಪೆನ್ನಿಗೂ ತಡೆ

ಮತ್ತೂ, ಹಿಡಿಯಬೇಕು
ರಂಗೋಲಿ ಕೆಳಗೆ ನುಸುಳುವರನ್ನ
ಆಮಿಷಗಳ ಅಳಿಸಿ
ಪ್ರತಿ ಮನೆಯಲ್ಲೂ ಬೆಳಸಿ
ಮತದಾನ ಜಾಗೃತಿ

ಉತ್ತಮರಿಗೆ ನಿಮ್ಮ
ಅಮೂಲ್ಯ ಮತ
ಅದುವೇ ಶ್ರೇಷ್ಠದಾನ
ನಿಮ್ಮ ಊರಾಗುವದು
ಹೊನ್ನಿನ ವನ

ಚುನಾವಣೆಗೊಮ್ಮೆ
 ಬಂದು ಹೋಗದಿರಲಿ
ಹದ್ದಿನ ಕಣ್ಣು 
ನಿತ್ಯವಿರಲಿ ನೀತಿಸಂಹಿತೆ





 

ಮಳೆ

ಮೋಡದ ನೆಲದಲ್ಲಿ
ಮಿಂಚಿನ ರಂಗವಲ್ಲಿ
ಗುಡುಗಿನ ವಾದ್ಯ
ಮಳೆಯ ಮೆರವಣಿಗೆ

 ಹೆಪ್ಪುಗಟ್ಟಿದ ಕತ್ತಲು
ಮಳೆ ಬಿದ್ದ ನೆಲ
ಸುವಾಸೆನೆಯ ಅಮಲು
ಸಿಡಿಲಿನ ಅಬ್ಬರ
ಮಧ್ಯರಾತ್ರಿ ಮೈ ತೊಳೆಯಿತು

 ಬದುಕಿನ ಬುಡಕೆ
ಜೀವ ರಸ
ಮರ ಗಿಡಗಳಲಿ
ನವ ಚೈತನ್ಯ
ಭೂತಾಯಿಗೆ ಅಮೃತಪಾನ .

 

 

ಗುರುವಾರ, ಏಪ್ರಿಲ್ 11, 2013

huri bisilu-hunase chiguru


ಉರಿ ಬಿಸಿಲು -ಹುಣಸೆ ಚಿಗುರು

ಭೂಮಿಯೇ ಬಾಯಿ ಬಿಟ್ಟು ನೀರು ಎನ್ನುವಂತ ಬಿರು ಬಿಸಿಲು ! ಮಳೆ ಮುಗಿಲು ಸೇರಿದೆ . ಬಿಸಿಲ ಧಗೆಗೆ ನೀರು ಕುಡಿ ಕುಡಿದು ಸಾಕಾಗಿದೆ . ಊಟ ರುಚಿಸುವುದಿಲ್ಲ . ಪ್ರಕೃತಿಯ ಪಾಕ ಶಾಲೆಯಲ್ಲಿ ಕಾಲಕ್ಕೆ ತಕ್ಕಂತೆ ಆಹಾರ  ತಯಾರಿಸುತ್ತದೆ. ಸೂಕ್ಷ್ಮ ಬುದ್ದಿಯಿಂದ ಅರಿತು ಅದರಂತೆ ನಡೆದರೆ ಆಹಾರವು ರುಚಿಸುವುದು ,ಆರೋಗ್ಯವು ಸುಧಾರಿಸುವುದು . ಉರಿ ಬಿಸಿಲಿನಲ್ಲಿ ಹುಣಸೆ ಮರ ಚಿಗುರಿದೆ . ಹಸಿರು ,ತಾಮ್ರ ವರ್ಣದ ಕೋಮಲ ಚಿಗುರು ಬೇಸಿಗೆಯ ಸ್ವಾದಿಷ್ಟ ಅಡುಗೆಯ ಒಂದು ಭಾಗವಾಗಿದೆ . ಕೆಲವರಿಗೆ ಗೊತ್ತಿರಲಿಕ್ಕಿಲ್ಲ , ಆದರೆ ತಮಿಳುನಾಡು ,ಆಂಧ್ರ ಪ್ರದೇಶಗಳಲ್ಲಿ ಹುಣಸೆ ಚಿಗುರಿನ ಸಾರು,ರಸಮ್ ,ಪುಳಿಯೊಗರೆ ,ಚಿತ್ರಾನ್ನ ಮಾಮೂಲಿ.

 

ಸಂಸ್ಕೃತದಲಿ ಚಿಂಚ ,ಹಿಂದಿಯಲಿ ಹಿಮ್ಲಿ ,ತೆಲುಗಿನಲ್ಲಿ ಚಿಂತಪಂಡು ,ಇಂಗ್ಲೀಷ್ನಲಿ tamarind tree ಎಂದು ಕರೆಯುವ ಹುಣಸೆ ಮರದ ವೈಜ್ಞಾನಿಕ ಹೆಸರು Tamarindus indica .fabeceae ಸಸ್ಯ ವರ್ಗಕ್ಕೆ ಸೇರಿದೆ . ಹುಣಸೆ ಮರದ ಎಲ್ಲಾ ಭಾಗಗಳು ಔಷಧಿ ಗುಣ ಹೊಂದಿವೆ .

ಚಿಗುರು,ಮೊಗ್ಗು ಮತ್ತು ಹೂ ಸೊಪ್ಪಿನ ಸಾರಿನಂತೆ ಉಪಯೋಗಿಸಬಹುದು . ಹುಣಸೆಯ ಹುಳಿ ರಸವು ಬಾಯಿಯನ್ನು ಸ್ವಚ್ಚಗೊಳಿಸುವದು . ಆಹಾರವನ್ನು ರುಚಿಸುವಂತೆ ಮಾಡುವುದು . ಹಸಿವು,ಜೀರ್ಣ ಶಕ್ತಿಯನ್ನು ಹೆಚ್ಚಿಸುವುದು .ಬೇಸಿಗೆ ದಿನಗಳಲಿ ಸಿಗುವ ಚಿಗುರು ಶರೀರಕ್ಕೆ ತಂಪು ನೀಡುವುದು. ಅದ್ದರಿಂದ ಅನುಭವಿಗಳು ಚಿಗುರಿನ ಸಾರನ್ನು ಇಷ್ಟಪಟ್ಟು ತಿನ್ನುವರು .ಔಷಧಿ ರೂಪದಲಿ ಬಳಕೆಯಾಗುವ ಚಿಗುರು ಸುಟ್ಟ ಗಯಾಗಳಿಗೆ ಉತ್ತಮ ಔಷಧಿಯಾಗಿದೆ .

ನೀವು ಪ್ರಯತ್ನ ಮಾಡಿ :

ಹುಳಿ ಸೊಪ್ಪು :

ಬೇಕಾಗುವ ಸಾಮಗ್ರಿಗಳು

ಪಾಲಕ್ ಸೊಪ್ಪು ,ಮೆಂತೆ ಸೊಪ್ಪು , ಹುಣಸೆ ಚಿಗುರು ,ತೊಗರಿಬೇಳೆ ,ಈರುಳ್ಳಿ 2 ,ಟಮೆಟೋ 2 ,ಮೆಣಸಿನಕಾಯಿ 6 , ಬದನೆ ಕಾಯಿ 1 ,ಬೆಳ್ಳುಳ್ಳಿ ಮಧ್ಯಮ ಗಾತ್ರದ್ದು 1 ,ಹುಣಸೆ ಹಣ್ಣು, ಸಾಂಬರ್ ಪುಡಿ,ಕಾಯಿ ತುರಿ

ಮಾಡುವ ವಿಧಾನ :

ಎಲ್ಲಾ ಸೊಪ್ಪುಗಳನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ . ಕುಕ್ಕರ್ ನಲ್ಲಿ ಹಚ್ಚಿಕೊಂಡ ಈರುಳ್ಳಿ ,

ಟಮೆಟೊ , ಮೆಣಸಿನಕಾಯಿ,ಬದೆನೆಕಾಯಿ ,ಹುಣಸೆಹಣ್ಣು ,ಸಾಂಬರ್ ಪುಡಿ ,ಉಪ್ಪು ,ಕಾಯಿತುರಿ ಮತ್ತು ಸೊಪ್ಪು ಒಂದು ಲೀಟರ ನೀರು ಹಾಕಿ 3 ವಿಶಿಲ್ ಕೂಗಿದ ನಂತರ ಕೆಳಗಿಳಿಸಿ ಮತ್ತೆ ಮಿಶ್ರಣವನ್ನು ಮಸೆದುಕೊಂಡು ಒಗ್ಗರಣೆ ಕೊಟ್ಟರೆ ಹುಳಿ ಸೊಪ್ಪು ರೆಡಿ .  

ಚಿಗುರು ಬೇಳೆ : ಬೇಕಾಗುವ ಸಾಮಗ್ರಿಗಳು

ಒಂದು ಕಪ್ ಎಳೆ ಹುಣಸೆ ಚಿಗುರು, ಎರಡು ಕಪ್ ತೊಗರಿ ಬೇಳೆ                                        

3 ಹಸಿಮೆಣಸಿನ ಕಾಯಿ ,2 ಚಮಚ ಬೆಲ್ಲದ ತುರಿ ,2 ಚಮಚ ಎಣ್ಣೆ ,2 ಒಣಗಿದ ಕೆಂಪು ಮೆಣಸಿನಕಾಯಿ ,10 ಎಸಳು ಬೆಳ್ಳುಳ್ಳಿ ,ರುಚಿಗೆ ತಕ್ಕಷ್ಟು ಉಪ್ಪು ,ಸ್ವಲ್ಪ ಹಿಂಗು ,ಹರಿಸಿನ ಪುಡಿ ,ಜೀರಿಗೆ ,ಸಾಸುವೆ ,ಕರಿಬೇವು

 

ಮಾಡುವ ವಿಧಾನ : ತೊಗರಿ ಬೇಳೆ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ . ಬಾಣಲೆಯಲ್ಲಿ ಚಮಚ ಎಣ್ಣೆ ಹಾಕಿ ,ಬೆಳ್ಳುಳ್ಳಿ ,ಜೀರಿಗೆ ,ಕರಿಬೇವು ,ಸಾಸುವೆ ಮತ್ತು ಒಣ ಮೆಣಸಿನ ಕಾಯಿ ಹಾಕಿ ಸ್ವಲ್ಪ ಸಮಯ ಉರಿಯಿರಿ . ಅದಕ್ಕೆ ಹಸಿ ಮೆಣಸಿನಕಾಯಿ ,ಹುಣಸೆ ಚಿಗುರು ಹಾಕಿ ಒಂದೆರಡು ನಿಮಿಷ ಫ್ರೈ ಮಾಡಿ . ನಂತರ ಹರಿಶಿನ ಪುಡಿ ,ರುಚಿಗೆ ತಕ್ಕ ಉಪ್ಪು ,ಬೆಲ್ಲದ ತುರಿ ಹಾಕಿ ಮತ್ತು ಬೇಯಿಸಿದ ಬೇಳೆ ಹಾಕಿ ಮಿಶ್ರ ಮಾಡಿ ಮಂದಾಗ್ನಿಯಲ್ಲಿ 5 ನಿಮಿಷ ಬೇಯಿಸಿ ,ದುಂಡಗೆ ಹಚ್ಚಿದ ಈರುಳ್ಳಿಯಿಂದ ಅಲಂಕರಿಸಿ .

 

ಹುಳಿ ಎಂದರೆ ಯಾರಿಗೆ ಇಷ್ಟವಿಲ್ಲ . ಅದರ ಹೆಸರೇ ಬಾಯಲ್ಲಿ ನೀರೂರಿಸುವ ಶಕ್ತಿ . ಅದರಲ್ಲೂ ಮಹಿಳಿಯರಿಗೆ ಹುಳಿ ಮಾವು ,ಹುಣಸೆ ಮುಂತಾದ ಹುಳಿ ಪದಾರ್ಥಗಳನ್ನು ಬಯಸಿ ತಿನ್ನುವರು. ಆಹಾರ,ಔಷಧಿ ಮತ್ತು ರುಚಿಕಾರಕ. ಬೇಸಿಗೆಯಲ್ಲಿ ಹುಣಸೆ ಚಿಗುರು ಶರೀರಕ್ಕೆ ಬಹಳ ತಂಪು . ನೀವು ಕೂಲ್ ಆಗಿರಬೇಕೆ ? ಟ್ರೈ ಮಾಡಿ .